ಸಾರಾಂಶ
ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಲುವಾಗಿ, ಏರ್‌ಟೆಲ್ ಕಂಪನಿಯು ಸ್ಟಾರ್‌ಲಿಂಕ್ ಜತೆ ಒಪ್ಪಂದ ಮಾಡಿಕೊಂಡ ಮರುದಿನವೇ ದೇಶದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಜಿಯೋ ಕಂಪನಿ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್‌ರ ಕಂಪನಿ ಜತೆ ಕೈಜೋಡಿಸಿದೆ.
ನವದೆಹಲಿ: ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಲುವಾಗಿ, ಏರ್‌ಟೆಲ್ ಕಂಪನಿಯು ಸ್ಟಾರ್‌ಲಿಂಕ್ ಜತೆ ಒಪ್ಪಂದ ಮಾಡಿಕೊಂಡ ಮರುದಿನವೇ ದೇಶದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಜಿಯೋ ಕಂಪನಿ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್‌ರ ಕಂಪನಿ ಜತೆ ಕೈಜೋಡಿಸಿದೆ.
ರಿಲಯನ್ಸ್ ಸಮೂಹದ ಡಿಜಿಟಲ್ ಸೇವೆಗಳ ಕಂಪನಿ ಜಿಯೋ ಹಾಗೂ ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ನಡುವೆ ಒಪ್ಪಂದ ಏರ್ಪಟ್ಟಿದ್ದು, ಇದರಡಿಯಲ್ಲಿ ಜಿಯೋ ಮೂಲಕ ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಒದಗಿಸುವ ಅಧಿಕಾರವನ್ನು ಸ್ಪೇಸ್‌ಎಕ್ಸ್ ಪಡೆಯಲಿದೆ.ಈ ಬಗ್ಗೆ ಮಾತನಾಡಿರುವ ಜಿಯೋದ ಸಿಇಒ ಮ್ಯಾಥ್ಯೂ ಓಮ್ಮೆನ್, ‘ಜಿಯೋದ ಬ್ರಾಡ್‌ಬ್ಯಾಂಡ್ ಜತೆ ಸ್ಟಾರ್‌ಲಿಂಕ್ಅನ್ನು ಸಂಯೋಜಿಸುವ ಮೂಲಕ, ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ. ಆ ಮೂಲಕ ಇಂದಿನ ಎಐ ಚಾಲಿತ ಯುಗದಲ್ಲಿ ವೇಗದ ಬ್ರಾಡ್‌ಬ್ಯಾಂಡ್‌ನ ಸೇವೆ ದೇಶಾದ್ಯಂತ ಲಭಿಸುವಂತೆ ಮಾಡುತ್ತೇವೆ’ ಎಂದಿದ್ದಾರೆ.ಸ್ಟಾರ್‌ಲಿಂಕ್ ಸೇವೆಗಳು ಜಿಯೋದ ಮಾರಾಟ ಮಳಿಗೆಗಳು ಹಾಗೂ ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿವೆ ಎಂದು ಜಿಯೋ ಹೇಳಿಕೆ ನೀಡಿದೆ.
ಉಪಗ್ರಹಗಳ ತರಂಗಗಳ ಮೂಲಕ ನೇರವಾಗಿ ಸ್ಟಾರ್‌ಲಿಂಕ್, ಅಂತರ್ಜಾಲ ಸೇವೆ ಒದಗಿಸುತ್ತದೆ. ಇದರಿಂದ ಯಾವುದೇ ಅಡೆತಡೆ ಇಲ್ಲದೆ ಕುಗ್ರಾಮಗಳು ಕೂಡ ಇಂಟರ್ನೆಟ್ ಪಡೆಯಬಹುದು.