ವಿಜಯ್‌ ಪಕ್ಷವನ್ನು ಬೆಂಬಲಿಸಲು ಅಣ್ಣಾಡಿಎಂಕೆಯ ಒಂದು ಬಣ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಪುದುಚೇರಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ 40ಕ್ಕೂ ಹೆಚ್ಚು ಶಾಸಕರ ಜೊತೆ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ.

ಪುದುಚೇರಿಯಲ್ಲಿ ಬೀಡುಬಿಟ್ಟ 40 ಶಾಸಕರ ಜತೆಗೆ ಮಾತುಕತೆಪುದುಚೇರಿ: ವಿಜಯ್‌ ಪಕ್ಷವನ್ನು ಬೆಂಬಲಿಸಲು ಅಣ್ಣಾಡಿಎಂಕೆಯ ಒಂದು ಬಣ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಪುದುಚೇರಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ 40ಕ್ಕೂ ಹೆಚ್ಚು ಶಾಸಕರ ಜೊತೆ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ.

ಅದರಲ್ಲಿ, ‘ನೀವ್ಯಾರು ಆತಂಕಕ್ಕೆ ಒಳಗಾಗಬೇಡಿ, ಒಗ್ಗಟ್ಟಾಗಿ ಇರಿ. ಶೀಘ್ರವೇ ಒಳ್ಳೆಯ ಸಮಯ ಬರುತ್ತದೆ’ ಎಂದು ಅಭಯ ನೀಡಿದ್ದಾರೆ. ಇದು ಯಾವುದಾದರೂ ಒಂದು ಪಕ್ಷದ ಜೊತೆಗೆ ಸೇರಿ ಅಣ್ಣಾಡಿಎಂಕೆ ಸರ್ಕಾರ ರಚನೆಯ ಸುಳಿವು ಇರಬಹುದು ಎಂದು ವಿಶ್ಲೇಷಿಸಲಾಗಿದೆ.

ಸದ್ಯ ಟಿವಿಕೆ 108, ಡಿಎಂಕೆ 59, ಅಣ್ಣಾಡಿಎಂಕೆ 47, ಕಾಂಗ್ರೆಸ್‌ 5, ಪಿಎಂಕೆ 4, ಐಯುಎಂಲಎ್‌ 2, ಸಿಪಿಐ 2, ಸಿಪಿಎಂ 2, ವಿಸಿಕೆ 2, ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ 1 ಸ್ಥಾನ ಹೊಂದಿವೆ.