ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಾಸಾ ಏರ್ ಮತ್ತು ಸ್ಪೈಸ್‌ ಜೆಟ್‌ ವಿಮಾನಗಳು ಪರಸ್ಪರ ಡಿಕ್ಕಿ ಆಗಿವೆ. ಅದೃಷ್ಟವಶಾತ್‌ ಪ್ರಯಾಣಿಕರು ಸೇಫ್‌ ಆಗಿದ್ದು ಭಾರೀ ಅನಾಹುತವೊಂದು ತಪ್ಪಿದೆ.

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಾಸಾ ಏರ್ ಮತ್ತು ಸ್ಪೈಸ್‌ ಜೆಟ್‌ ವಿಮಾನಗಳು ಪರಸ್ಪರ ಡಿಕ್ಕಿ ಆಗಿವೆ. ಅದೃಷ್ಟವಶಾತ್‌ ಪ್ರಯಾಣಿಕರು ಸೇಫ್‌ ಆಗಿದ್ದು ಭಾರೀ ಅನಾಹುತವೊಂದು ತಪ್ಪಿದೆ. 

ಆಕಾಸಾ ಏರ್‌ಲೈನ್ಸ್‌ ವಿಮಾನ

ಆಕಾಸಾ ಏರ್‌ಲೈನ್ಸ್‌ ವಿಮಾನವು ದೆಹಲಿಯಿಂದ ಹೈದರಾಬಾದ್‌ಗೆ ತೆರಳಲು ಸಿದ್ಧವಾಗಿತ್ತು. ಇತ್ತ ಸ್ಪೈಸ್‌ ಜೆಟ್ ಲೇಹ್‌ನಿಂದ ದೆಹಲಿಯ ರನ್‌ವೇಗೆ ಬಂದಿಳಿದಿತ್ತು.

ರೆಕ್ಕೆ ಪರಸ್ಪರ ಡಿಕ್ಕಿ

ಈ ವೇಳೆ ಎರಡೂ ವಿಮಾನಗಳ ರೆಕ್ಕೆ ಪರಸ್ಪರ ಡಿಕ್ಕಿ ಆಗಿದೆ. ಇದರಿಂದ ಸ್ಪೈಸ್‌ಜೆಟ್ ರೆಕ್ಕೆಗೆ ಹಾನಿಯಾಗಿದ್ದರೆ ಅಕಾಸಾ ಏರ್ ವಿಮಾನದ ಎಡಭಾಗದ ರೆಕ್ಕೆ ಜಖಂಗೊಂಡಿದೆ.