- 100ಕ್ಕೂ ಹೆಚ್ಚು ಕೌನ್ಸಿಲರ್‌ಗಳು ರಾಜೀನಾಮೆ
ಕಲ್ಯಾಣಿ/ ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೀನಾಯ ಸೋಲಿನ ಬೆನ್ನಲ್ಲೇ ಪಕ್ಷದಲ್ಲಿ ಭಾರೀ ತಲ್ಲಣ ಉಂಟಾಗಿದೆ. ಒಂದೆಡೆ ಸಿಎಂ ಸುವೇಂದು ಅಧಿಕಾರಿ ಕರೆದಿದ್ದ ಆಡಳಿತ ಪರಿಶೀಲನಾ ಸಭೆಗೆ ಓರ್ವ ಸಂಸದ, 6 ಶಾಸಕರು ಭಾಗಿಯಾಗಿದ್ದಾರೆ. ಮತ್ತೊಂದೆಡೆ ರಾಜ್ಯವ್ಯಾಪಿ 100ಕ್ಕೂ ಹೆಚ್ಚು ಕೌನ್ಸಿಲರ್‌ಗಳು ರಾಜೀನಾಮೆ ನೀಡಿದ್ದಾರೆ.ಸೋಲಿನ ಬೆನ್ನಲ್ಲೇ ಟಿಎಂಸಿ ಗೊಂದಲದ ಗೂಡಾಗಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಅದನ್ನು ಸಾಕ್ಷೀಕರಿಸುವಂತೆ ಪಕ್ಷದ ಹಿರಿಯ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಇತರ ಆರು ಶಾಸಕರು ಮಂಗಳವಾರ ಕಲ್ಯಾಣಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಡಳಿತ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.
ಇತ್ತೀಚೆಗಷ್ಟೇ ದಸ್ತಿದಾರ್ ಪಕ್ಷ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡು. ಪಕ್ಷದ ಸಂಘಟನಾತ್ಮಕ ಹುದ್ದೆಗೂ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಸಭೆಯಲ್ಲಿ ಪಾಲ್ಗೊಂಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.100ಕ್ಕೂ ಹೆಚ್ಚು ಕೌನ್ಸಿಲರ್‌ಗಳ ರಾಜೀನಾಮೆ:
ಇನ್ನು ದೀದಿಗೆ ರಾಜ್ಯವ್ಯಾಪಿ ಕೌನ್ಸಿಲರ್‌ಗಳು ಶಾಕ್ ನೀಡಿದ್ದಾರೆ. ವಿವಿಧ ಪುರಸಭೆಯ 100ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಪಕ್ಷದೊಳಗೆ ಹೆಚ್ಚುತ್ತಿರುವ ಅಸಮಾಧಾನ, ಭ್ರಷ್ಟಾಚಾರ ತನಿಖೆಗಳ ಭಯ ಸೇರಿ ಹಲವು ಕಾರಣಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.