ಸಾರಾಂಶ
ಜಗನ್ಮೋಹನ ರೆಡ್ಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬಡ ಮಹಿಳೆ ಎಂದು ಪ್ರಚಾರ ಮಾಡುತ್ತಿದ್ದರು. ಈಗ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಮಾಹಿತಿಯಲ್ಲಿ ಆಕೆ 161 ಕೋಟಿ ರು. ಒಡತಿ ಎಂಬುದು ಬಹಿರಂಗವಾಗಿದೆ.
ಕರ್ನೂಲ್: ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿ ಪಕ್ಷದ ಎಮ್ಮಿಗಾನೂರು ಕ್ಷೇತ್ರದ ಮಹಿಳಾ ಅಭ್ಯರ್ಥಿ ಬುಟ್ಟಾ ರೇಣುಕಾ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಅವರು ತಮ್ಮ ಬಳಿ 161 ಕೋಟಿ ರು. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ವಿಚಿತ್ರವೆಂದರೆ ಕೆಲ ತಿಂಗಳ ಹಿಂದೆ ರೇಣುಕಾ ಅವರು ಟಿಡಿಪಿ ತೊರೆದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸೇರಿದ ವೇಳೆ ಮಾತನಾಡಿದ್ದ ಮುಖ್ಯಮಂತ್ರಿ ಜಗನ್, ರೇಣುಕಾ ಸಾಮಾನ್ಯ ಕುಟುಂಬದಿಂದ ಬಂದವರು, ಅವರೊಬ್ಬ ಬಡ ಮಹಿಳೆ ಎಂದಿದ್ದರು.
ಇನ್ನೊಂದು ವಿಶೇಷವೆಂದರೆ ಕಳೆದ ಚುನಾವಣೆಯಲ್ಲಿ ರೇಣುಕಾ 250 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದರು.