ಸಂಧಾನಕಾರ ರಾಷ್ಟ್ರ ಪಾಕಿಸ್ತಾನಕ್ಕೆ ತಮ್ಮ ನಿಯೋಗ ಹೋಗುವುದಿಲ್ಲ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ, ‘ಇನ್ನೇನಿದ್ದರೂ ಫೋನ್‌ನಲ್ಲಿ ಮಾತುಕತೆ ನಡೆಯುತ್ತದೆ. ಬೇಕಿದ್ದರೆ ಇರಾನ್ ಕರೆ ಮಾಡಲಿ’ ಎಂದು ಹೇಳಿದ್ದಾರೆ.
ಮುಖತಃ ಮಾತುಕತೆ ಇನ್ನಿಲ್ಲ । ಬೇಕಿದ್ರೆ ಇರಾನ್ ಫೋನ್ ಮಾಡಲಿ
ವಾಷಿಂಗ್ಟನ್: ಸಂಧಾನಕಾರ ರಾಷ್ಟ್ರ ಪಾಕಿಸ್ತಾನಕ್ಕೆ ತಮ್ಮ ನಿಯೋಗ ಹೋಗುವುದಿಲ್ಲ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ, ‘ಇನ್ನೇನಿದ್ದರೂ ಫೋನ್‌ನಲ್ಲಿ ಮಾತುಕತೆ ನಡೆಯುತ್ತದೆ. ಬೇಕಿದ್ದರೆ ಇರಾನ್ ಕರೆ ಮಾಡಲಿ’ ಎಂದು ಹೇಳಿದ್ದಾರೆ.ಫಾಕ್ಸ್ ನ್ಯೂಸ್ ಜತೆ ಮಾತನಾಡಿ, ‘ಇರಾನ್ ಜತೆಗಿನ ಯುದ್ಧ ಆದಷ್ಟು ಬೇಗ ಮುಗಿಯಬಹುದು ಹಾಗೂ ನಾವು ಜಯಶಾಲಿಗಳಾಗುತ್ತೇವೆ. ಮುಂದಿನ ಮಾತುಕತೆಗಳು ದೂರವಾಣಿ ಮೂಲಕವೇ ನಡೆಯಲಿದ್ದು, ಮಾತಾಡಬೇಕಿದ್ದರೆ ಇರಾನ್ ನಮಗೆ ಕರೆ ಮಾಡಲಿ. ಇರಾನಿಗರು ಬೇಗ ಸ್ಮಾರ್ಟ್ ಆಗಲಿ’ ಎಂದಿದ್ದಾರೆ.ಜತೆಗೆ, ‘ಸಂಧಾನದ ಭಾಗವಾಗಿ ಇರಾನ್ ಬಳಿಯಿರುವ ಅಣು ಧೂಳನ್ನು ವಶಪಡಿಸಿಕೊಳ್ಳುತ್ತೇವೆ’ ಎಂದೂ ಟ್ರಂಪ್ ಹೇಳಿದ್ದಾರೆ. ಈ ಮೂಲಕ, ಸಂಧಾನದ ಬಾಗಿಲು ಸಂಪೂರ್ಣ ಮುಚ್ಚಿಲ್ಲ ಎಂದು ಹೇಳಿದ್ದಾರೆ.
