ಸಾರಾಂಶ
ಲೆಫ್ಟಿನೆಂಟ್ ಗವರ್ನರ್‌ಗೆ ಜೈಲಧಿಕಾರಿಗಳ ಮಾಹಿತಿಯಲ್ಲಿ ಅರವಿಂದ್ ಕೇಜ್ರಿವಾಲ್ ಆರೋಗ್ಯದ ಕುರಿತು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಬಂಧನಕ್ಕೂ ಮೊದಲೇ ಮಧುಮೇಹಕ್ಕೆ ಬಳಸುವ ಇನ್ಸುಲಿನ್ ಪಡೆಯುವುದನ್ನು ನಿಲ್ಲಿಸಿದ್ದು ಎಂದು ಜೈಲಧಿಕಾರಿಗಳು ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಮಾಹಿತಿ ನೀಡಿದ್ದಾರೆ.
ಕೇಜ್ರಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದರೂ ಅವರಿಗೆ ಇನ್ಸುಲಿನ್ ನೀಡದೇ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆಮ್‌ಆದ್ಮಿ ಪಕ್ಷದ ನಾಯಕರ ಆರೋಪದ ಹಿನ್ನೆಲೆಯಲ್ಲಿ ಈ ಕುರಿತು 24 ಗಂಟೆಗಳಲ್ಲಿ ವರದಿ ನೀಡುವಂತೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ವರದಿ ಸಲ್ಲಿಸಿರುವ ಅಧಿಕಾರಿಗಳು, ಬಂಧನಕ್ಕೂ ತಿಂಗಳ ಮೊದಲೇ ಕೇಜ್ರಿವಾಲ್ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು.
ಮಧುಮೇಹ ನಿಯಂತ್ರಣಕ್ಕೆ ಮೌಖಿಕ ಔಷಧಗಳನ್ನು ಬಳಸುತ್ತಿದ್ದಾರೆಂದು ತಿಳಿಸಿದ್ದಾರೆ.