ಸಾರಾಂಶ
ಹೈದರಾಬಾದ್: ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆ ಮೇಲೆ ಬಾಂಬ್ ದಾಳಿ ಬೆನ್ನಲ್ಲೇ, ಎಂಐಎಂ ಪಕ್ಷದ ನಾಯಕ, ಸಂಸದ ಅಸಾದುದ್ದೀನ್ ಒವೈಸಿ ಇತ್ತೀಚೆಗಷ್ಟೇ ಇಲ್ಲಿ ಆರಂಭವಾದ ರಾಮೇಶ್ವರ ಕೆಫೆಗೆ ಶನಿವಾರ ಭೇಟಿ ನೀಡಿದರು.
ಈ ವೇಳೆ ಪ್ರತಿಕ್ರಿಯಿಸಿದ ಅವರು ಇಲ್ಲಿ ಸಿಗುವ ಆಹಾರ ಆಹಾರ ತುಂಬಾ ಚೆನ್ನಾಗಿದ್ದು, ಈ ಕೆಫೆಗೆ ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟೂರಿನ ಹೆಸರಿಟ್ಟಿರುವುದು ಶ್ಲಾಘನೀಯ.
ಆದರೆ ಕಿಡಿಗೇಡಿಗಳು ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಇಟ್ಟಿರುವುದು ಹೇಡಿತನದ ಕೃತ್ಯ. ಇದು ಭಾರತದ ಮೌಲ್ಯದ ಮೇಲಿನ ದಾಳಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎಐಎಂಐಎಂನ ಅಧ್ಯಕ್ಷ ಹಾಗೂ ಇಲ್ಲಿನ ಸಂಸದ ಅಸಾದುದ್ದೀನ್ ಓವೈಸಿ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಾದ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ.
ರಾಮೇಶ್ವರ ಕೆಫೆಗೆ ಭಾನುವಾರ ಭೇಟಿ ನೀಡಿದ ಅವರು, ರಾಮೇಶ್ವರ ಕೆಫೆಯಲ್ಲಿ ಸಿಗುವ ಆಹಾರ ತುಂಬಾ ಚೆನ್ನಾಗಿದ್ದು, ಈ ಕೆಫೆಗೆ ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟೂರಿನ ಹೆಸರಿಟ್ಟಿರುವುದು ಶ್ಲಾಘನೀಯ.
ಆದರೆ ಕಿಡಿಗೇಡಿಗಳು ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಇಟ್ಟಿರುವುದು ಹೇಡಿತನದ ಕೃತ್ಯ. ಇದು ಭಾರತದ ಮೌಲ್ಯದ ಮೇಲಿನ ದಾಳಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.