ಸಾರಾಂಶ
ಏಷ್ಯಾದ ಅತ್ಯಂತ ಹಿರಿಯ ಆನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆನೆ ವತ್ಸಲಾ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಾರೋಗ್ಯದಿಂದ ನಿಧನವಾಗಿದೆ.
ಭೋಪಾಲ್: ಏಷ್ಯಾದ ಅತ್ಯಂತ ಹಿರಿಯ ಆನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆನೆ ವತ್ಸಲಾ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಾರೋಗ್ಯದಿಂದ ನಿಧನವಾಗಿದೆ.
ಕೇರಳದ ನರ್ಮದಾಪುರಂನಲ್ಲಿ ಜನಿಸಿದ್ದ ವತ್ಸಲಾ ಆನೆಯನ್ನು ಆ ಬಳಿಕ ಮಧ್ಯಪ್ರದೇಶಕ್ಕೆ ಕರೆತರಲಾಗಿತ್ತು. ಸುಮಾರು 100 ವರ್ಷಕ್ಕೂ ಅಧಿಕ ಕಾಲ ಬಾಳಿದ್ದ ಈ ಆನೆ ಗಾತ್ರದಲ್ಲಿಯೂ ದೊಡ್ಡದಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಜೀವಮಾನದ ಬಹುಪಾಲು ಭಾಗವನ್ನು ಪನ್ನಾದಲ್ಲಿ ಕಳೆದಿದ್ದ ವತ್ಸಲಾ ಇತರ ಆನೆಗಳು ಮರಿ ಹಾಕಿದಾಗ ಅಜ್ಜಿಯ ಪಾತ್ರವನ್ನು ನಿಭಾಯಿಸುತ್ತಿತ್ತು. ಇಡೀ ಆನೆಗಳ ಗುಂಪಿನ ನಾಯಕಿಯಾಗಿತ್ತು. ವಯಸ್ಸಾದ ಕಾರಣದಿಂದ ದೃಷ್ಟಿ ಕಳೆದುಕೊಂಡಿದ್ದ ವತ್ಸಲಾ ಮುಂಭಾಗದ ಕಾಲುಗಳಿಗೆ ಗಾಯವಾಗಿತ್ತು. ಇತ್ತೀಚೆಗೆ ಕುಸಿದು ಬಿದ್ದಿದ್ದ ಆನೆಯನ್ನು ಸಿಬ್ಬಂದಿ ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.