ವಾಯುಪಡೆ ಮಾಜಿ ಮುಖ್ಯಸ್ಥ ಬಧೌರಿಯಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನವದೆಹಲಿ: ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್‌.ಕೆ.ಎಸ್‌. ಬಧೌರಿಯಾ ಭಾನುವಾರ ಇಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಬಧೌರಿಯಾ, ‘ಕಳೆದ 8-10 ವರ್ಷಗಳು ದೇಶದ ಪಾಲಿಗೆ ಸುವರ್ಣಯುಗ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಸಶಸ್ತ್ರ ಪಡೆಗಳ ಆತ್ಮನಿರ್ಭರತೆ ಮತ್ತು ಆಧುನೀಕರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದು ಬಣ್ಣಿಸಿದರು. 

ಅಲ್ಲದೆ ದೇಶದ ಭದ್ರತೆಗಾಗಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಅವರ ಸರ್ಕಾರದ ದೂರದೃಷ್ಟಿಯನ್ನು ಬಧೌರಿಯಾ ಹೊಗಳಿದರು.

ಇದೇ ವೇಳೆ ಮಾಜಿ ಸಂಸದ ವೈಆರ್‌ಎಸ್‌ ಪಕ್ಷದ ನಾಯಕ ವರಪ್ರಸಾದ್‌ ರಾವ್‌ ಕೂಡಾ ಬಿಜೆಪಿ ಸೇರ್ಪಡೆಯಾಗಿದ್ದು ಅವರಿಗೆ ತಿರುಪತಿಯಿಂದ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಕ್ಕಿದೆ.