ಬಾಂಗ್ಲಾ: 6 ತಿಂಗಳ ಬಳಿಕ ಇಸ್ಕಾನ್‌ ಸನ್ಯಾಸಿ ಚಿನ್ಮಯ್‌ಗೆ ಜಾಮೀನು

| N/A | Published : May 01 2025, 12:46 AM IST / Updated: May 01 2025, 05:02 AM IST

ಸಾರಾಂಶ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದೇಶದ್ರೋಹ ಪ್ರಕರಣದಲ್ಲಿ ಬಾಂಗ್ಲಾದಲ್ಲಿ ಬಂಧನಕ್ಕೊಳಗಾಗಿದ್ದ ಇಸ್ಕಾನ್ ಸನ್ಯಾಸಿ ಚಿನ್ಮಯ್‌ ದಾಸ್‌ಗೆ ಬುಧವಾರ ಬಾಂಗ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ನವದೆಹಲಿ: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದೇಶದ್ರೋಹ ಪ್ರಕರಣದಲ್ಲಿ ಬಾಂಗ್ಲಾದಲ್ಲಿ ಬಂಧನಕ್ಕೊಳಗಾಗಿದ್ದ ಇಸ್ಕಾನ್ ಸನ್ಯಾಸಿ ಚಿನ್ಮಯ್‌ ದಾಸ್‌ಗೆ ಬುಧವಾರ ಬಾಂಗ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬಾಂಗ್ಲಾ ಹಿಂಸಾಚಾರದ ನಡುವೆ ಕಳೆದ ಅಕ್ಟೋಬರ್‌ 25ರಂದು ಚಿತ್ತಗಾಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಂಗ್ಲಾ ದೇಶದ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾರಿಸಿದ ಕಾರಣಕ್ಕಾಗಿ ಅಕ್ಟೋಬರ್‌ 30 ರಂದು ದಾಸ್‌ ಮತ್ತು 18 ಜನರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿ ಬಂಧನಕ್ಕೊಳಗಾಗಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ತಕ್ಷಣವೇ ಬಿಡುಗಡೆಗೆ ಕೂಗು ಕೇಳಿ ಬಂದಿತ್ತು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಲ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದೀಗ ಅವರಿಗೆ 6 ತಿಂಗಳ ಬಳಿಕ ಜಾಮೀನು ಮಂಜೂರಾಗಿದೆ.