ಡ್ರೋನ್‌ನಿಂದ ಮಷಿನ್‌ಗನ್‌ ದಾಳಿ : ಬೆಂಗಳೂರು ಕಂಪನಿಯ ಸಾಧನೆ

| N/A | Published : Jun 28 2025, 12:27 AM IST / Updated: Jun 28 2025, 05:03 AM IST

ಡ್ರೋನ್‌ನಿಂದ ಮಷಿನ್‌ಗನ್‌ ದಾಳಿ : ಬೆಂಗಳೂರು ಕಂಪನಿಯ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಯುದ್ಧ ತಂತ್ರಗಳು ಬದಲಾಗುತ್ತಿರುವ, ಹೊಸದರತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲೇ, ಮಷಿನ್‌ಗನ್‌ ದಾಳಿ ನಡೆಸುವ ಅತ್ಯಾಧುನಿಕ ಎಐ ಆಧರಿತ ಡ್ರೋನ್‌ ಒಂದನ್ನು ಬೆಂಗಳೂರು ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ.

 ನವದೆಹಲಿ: ಯುದ್ಧ ತಂತ್ರಗಳು ಬದಲಾಗುತ್ತಿರುವ, ಹೊಸದರತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲೇ, ಮಷಿನ್‌ಗನ್‌ ದಾಳಿ ನಡೆಸುವ ಅತ್ಯಾಧುನಿಕ ಎಐ ಆಧರಿತ ಡ್ರೋನ್‌ ಒಂದನ್ನು ಬೆಂಗಳೂರು ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ.

ಬೆಂಗಳೂರು ಮೂಲದ ಭಾರತ್‌ ಸಪ್ಲೈಯ್‌ ಆ್ಯಂಡ್‌ ಸರ್ವಿಸಸ್‌ (ಬಿಎಸ್‌ಎಸ್‌) ಈ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದು ದೇಶದಲ್ಲೇ ಮೊದಲ ಎಐ ಆಧರಿತ ಡ್ರೋನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ..

ಭಾರತೀಯ ಸೇನೆಯ ಸಹಯೋಗದಲ್ಲಿ ಅಭಿವೃದ್ದಿಪಡಿಸಲಾದ ಈ ಅತ್ಯಾಧುನಿಕ ಡ್ರೋನ್‌ ಮೂಲಕ ಎಕೆ- 203 ಮಷಿನ್‌ಗನ್‌ ಬಳಸಿ ದಾಳಿ ನಡೆಸಬಹುದಾಗಿದೆ. ಈ ಡ್ರೋನ್‌ ಅನ್ನು ಕಣ್ಗಾವಲಿನ ಜೊತೆಗೆ ದಾಳಿಗೂ ಬಳಸಬಹುದಾಗಿದೆ. ಅಂದರೆ ಈ ಡ್ರೋನ್‌ ಆಗಸದಲ್ಲಿ ಸಂಚರಿಸುತ್ತಲೇ ನಿಗದಿತ ಗುರಿಯತ್ತ ಗುಂಡಿನ ದಾಳಿ ನಡೆಸಬಲ್ಲದು. ಇತ್ತೀಚೆಗೆ ಈ ಡ್ರೋನ್‌ ಅನ್ನು ಭಾರತೀಯ ಸೇನೆಯ ಸಹಯೋಗದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಸಲಾಗಿದೆ.

ಪ್ರಯೋಗದ ವೇಳೆ, ಇವು 300 ಮೀಟರ್ ದೂರದಲ್ಲಿರುವ ಗುರಿಗಳನ್ನು ಗುರುತಿಸಿ, ಅವುಗಳನ್ನು 600 ಮೀಟರ್‌ಗಳವರೆಗೆ ನಿಖರವಾಗಿ ಹಿಂಬಾಲಿಸಿದೆ. ಜೊತೆಗೆ ಈ ಡ್ರೋನ್‌ಗಳು 1000 ಮೀಟರ್‌ ದೂರದವರೆಗೂ ದಾಳಿ ನಡೆಸಬಲ್ಲವು.

ಈ ಗನ್‌ಗಳನ್ನು ಇತ್ತೀಚೆಗೆ ಸಮುದ್ರದ ಮಟ್ಟದಿಂದ 14500 ಅಡಿ ಎತ್ತರದಲ್ಲಿ ಪರೀಕ್ಷಿಸಲಾಗಿದ್ದು, 21 ದಿನಗಳ ಕಾಲ ಬಂಕರ್‌ಗಳ ಒಳಗೂ ಇಟ್ಟು ಪರೀಕ್ಷಿಸಲಾಗಿದೆ. ಈ ಮೂಲಕ ಯಾವುದೇ ಹವಾಮಾನ, ಪರಿಸ್ಥಿತಿಯಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.

Read more Articles on