ಜೈಲಲ್ಲಿ ಉಗ್ರರ ಥರ ಕೇಜ್ರಿವಾಲ್‌ಗೆ ‘ಆತಿಥ್ಯ’: ಮಾನ್‌ ಕಿಡಿ

| Published : Apr 16 2024, 01:04 AM IST / Updated: Apr 16 2024, 06:08 AM IST

Arvind Kejrival
ಜೈಲಲ್ಲಿ ಉಗ್ರರ ಥರ ಕೇಜ್ರಿವಾಲ್‌ಗೆ ‘ಆತಿಥ್ಯ’: ಮಾನ್‌ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿ ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಟೆರರಿಸ್ಟ್‌ ತರ ನೋಡಲಾಗುತ್ತಿದ್ದೆ, ಕ್ರಿಮಿನಲ್‌ಗಳಿಗಿಂತ ಕಡೆಯಾಗಿ ಕಾಣಲಾಗುತ್ತಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವತ್‌ ಮಾನ್‌ ಸೋಮವಾರ ಆರೋಪಿಸಿದರು.

ವದೆಹಲಿ: ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿ ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಟೆರರಿಸ್ಟ್‌ ತರ ನೋಡಲಾಗುತ್ತಿದ್ದೆ, ಕ್ರಿಮಿನಲ್‌ಗಳಿಗಿಂತ ಕಡೆಯಾಗಿ ಕಾಣಲಾಗುತ್ತಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವತ್‌ ಮಾನ್‌ ಸೋಮವಾರ ಆರೋಪಿಸಿದರು.

ಎಎಪಿ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಜೊತೆ ಕೇಜ್ರಿವಾಲ್ ಅವರನ್ನು ಭೇಟಿಯಾದ ಮಾನ್‌ ಬಳಿಕ ಮಾತನಾಡಿ, ಗಾಜಿನ ಗೋಡೆಯ ನಡುವೆ ಫೋನ್ ಮುಖಾಂತರ ಕೇಜ್ರಿವಾಲ್‌ ಅವರೊಂದಿಗೆ 30 ನಿಮಿಷಗಳ ಕಾಲ ಸಂವಹನ ನಡೆಸಿದೆ ಎಂದರು.

ಕೇಜ್ರಿವಾಲ್‌ ಮಾಡಿರುವ ತಪ್ಪಾದರೂ ಏನು, ಅವರು ಮೊಹೆಲ್ಲಾ ಕ್ಲಿನಿಕ್‌ಗಳನ್ನು ತೆರೆದಿದ್ದೇ ಅವರ ತಪ್ಪಾ. ಅವರಿಗೆ ಉಗ್ರರ ಥರ ಆತಿಥ್ಯ ಏಕೆ ಎಂದು ಪ್ರಶ್ನಿಸಿದ್ದಾರೆ.

ದಿಲ್ಲಿ ಮದ್ಯ ಹಗರಣ: ಗೋವಾಗೆ ಹಣ ಕಳಿಸಿದವನ ಬಂಧನ

ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಚನ್‌ಪ್ರೀತ್‌ ಸಿಂಗ್ ಎಂಬ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದೆ.2022ರ ಗೋವಾ ವಿಧಾನಸಭಾ ಚುನಾವಣೆ ಸಮಯದಲ್ಲಿ ಈತ ಹಣವನ್ನು ನಿರ್ವಹಣೆ ಮಾಡುತ್ತಿದ್ದ. ದಿಲ್ಲಿಯಲ್ಲಿ ಸಂಗ್ರಹವಾದ ಮದ್ಯ ಹಗರಣದ ಹಣವನ್ನು ಆತ ಗೋವಾ ಚುನಾವಣೆ ಸಮಯದಲ್ಲಿ ಸಮೀಕ್ಷೆ ನಡೆಸಿದ ಕಾರ್ಯಕರ್ತರಿಗೆ ಹಣ ಪಾವತಿ, ಏರಿಯಾ ಮ್ಯಾನೇಜರ್‌, ಅಸೆಂಬ್ಲಿ ಮ್ಯಾನೇಜರ್‌ ಹಾಗೂ ಇತರೆ ಸಂಬಂಧಪಟ್ಟವರಿಗೆ ಪಾವತಿ ಮಾಡುವುದನ್ನು ನೋಡಿಕೊಳ್ಳುತ್ತಿದ್ದ ಎಂದು ಇ.ಡಿ. ಆರೋಪಿಸಿದೆ. ಇದೇ ಪ್ರಕರಣದಲ್ಲಿ ಈ ಮೊದಲು ಸಿಬಿಐ ಈತನನ್ನು ಬಂಧಿಸಿತ್ತು. ಈತನ ಬಂಧನದಿಂದಾಗಿ ಹಗರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.