ಕೈನ ಗ್ಯಾರಂಟಿ ಕಾರ್ಡ್‌ ವಿರುದ್ಧ ಬಿಜೆಪಿ ದೂರು

| Published : Apr 17 2024, 01:18 AM IST

ಸಾರಾಂಶ

ಕಾಂಗ್ರೆಸ್‌ ಪಕ್ಷದ ಘರ್‌ ಘರ್‌ ಗ್ಯಾರಂಟಿ ಕಾರ್ಡ್‌ ಅಭಿಯಾನವು ಲಂಚಭರಿತವಾಗಿದ್ದು, ಅದನ್ನು ನಿಲ್ಲಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ನವದೆಹಲಿ: ಕಾಂಗ್ರೆಸ್‌ ಪಕ್ಷದ ಘರ್‌ ಘರ್‌ ಗ್ಯಾರಂಟಿ ಕಾರ್ಡ್‌ ಅಭಿಯಾನವು ಲಂಚಭರಿತವಾಗಿದ್ದು, ಅದನ್ನು ನಿಲ್ಲಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಡುಗಡೆ ಮಾಡಿದ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ವಿತರಣೆ ಮಾಡುತ್ತಿದ್ದು, ಚುನಾವಣಾ ಲಂಚ ನೀಡುವ ಮೂಲಕ ಮತದಾರರಿಗೆ ಲಂಚತನದ ಅಭ್ಯಾಸ ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಾಗಿದ್ದರೂ ಗ್ಯಾರಂಟಿ ಕಾರ್ಡ್‌ ಯೋಜನೆ ಮೂಲಕ ಜನರನ್ನು ಗೊಂದಲಕ್ಕೆ ದೂಡುವ ಕೆಲಸವನ್ನು ಕಾಂಗ್ರೆಸ್‌ ಪಕ್ಷ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಆರೋಪ ಮಾಡಿದ್ದಾರೆ.

ಅಲ್ಲದೆ ಗ್ಯಾರಂಟಿ ಕಾರ್ಡಿನಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರ ಸಹಿ ಇದ್ದು, ಇದು ಪಕ್ಷದ ಗ್ಯಾರಂಟಿಗೆ ಖಾತರಿ ನೀಡುತ್ತದೆ. ಇಂಥ ಗ್ಯಾರಂಟಿ ಕಾರ್ಡ್‌ ಮುದ್ರಿಸಿ ಹಂಚುವ ಮೂಲಕ ಅದನ್ನು ನ್ಯಾಯಬದ್ಧ ಖಾತರಿ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.