ಸಾರಾಂಶ
: ‘ಪಹಲ್ಗಾಂ ಭಯೋತ್ಪಾದಕ ದಾಳಿಯ ವಿಧವೆಯರು ತಮ್ಮ ಗಂಡಂದಿರ ಜೀವಕ್ಕಾಗಿ ಬೇಡಿಕೊಳ್ಳುವ ಬದಲು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು’ ಎಂದು ಬಿಜೆಪಿ ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ಹೇಳಿದ್ದಾರೆ. ಈ ಮೂಲಕ ವಿವಾದಿತ ಹೇಳಿಕೆ ಸರಣಿ ಮುಂದುವರಿದಿವೆ.
ಭೋಪಾಲ್: ‘ಪಹಲ್ಗಾಂ ಭಯೋತ್ಪಾದಕ ದಾಳಿಯ ವಿಧವೆಯರು ತಮ್ಮ ಗಂಡಂದಿರ ಜೀವಕ್ಕಾಗಿ ಬೇಡಿಕೊಳ್ಳುವ ಬದಲು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು’ ಎಂದು ಬಿಜೆಪಿ ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ಹೇಳಿದ್ದಾರೆ. ಈ ಮೂಲಕ ವಿವಾದಿತ ಹೇಳಿಕೆ ಸರಣಿ ಮುಂದುವರಿದಿವೆ.
ಭಿವಾನಿಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ‘ಪಹಲ್ಗಾಂನಲ್ಲಿ ಮಹಿಳೆಯರು ರಾಣಿ ಲಕ್ಷ್ಮಿಬಾಯಿ ಅಥವಾ ಅಹಲ್ಯಾಬಾಯಿ ಹೋಳ್ಕರ್ ಅವರ ಧೈರ್ಯವನ್ನು ತೋರಿಸಿ ಉಗ್ರರ ಎದುರಿಸಿದ್ದರೆ, ಸಾವು-ನೋವು ಕಡಿಮೆ ಆಗುತ್ತಿತ್ತು. ಉಗ್ರರು ಕೈಮುಗಿದರೆ ಕೇಳುವವರಲ್ಲ’ ಎಂದರು. ಅವರ ಹೇಳಿಕೆಯನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ನಾಚಿಕೆಗೇಡು’ ಎಂದು ಖಂಡಿಸಿದ್ದಾರೆ.