‘ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ತಂದೆ ಯಾರೆಂದು ಖಚಿತಪಡಿಸಿಕೊಳ್ಳಲಿ’ ಎಂದು ಹೇಳಿದ ಮಾತು ವಿವಾದಕ್ಕೀಡಾದ ಬೆನ್ನಲ್ಲೇ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಕ್ಷಮೆಯಾಚಿಸಿದ್ದಾರೆ.

ಕೋಲ್ಕತಾ: ‘ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ತಂದೆ ಯಾರೆಂದು ಖಚಿತಪಡಿಸಿಕೊಳ್ಳಲಿ’ ಎಂದು ಹೇಳಿದ ಮಾತು ವಿವಾದಕ್ಕೀಡಾದ ಬೆನ್ನಲ್ಲೇ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಕ್ಷಮೆಯಾಚಿಸಿದ್ದಾರೆ. 

ಈ ಕುರಿತು ವಿಡಿಯೋ ಸಂದೇಶ ಕಳುಹಿಸಿರುವ ಘೋಷ್‌, ‘ನನ್ನ ನಿಷ್ಠುರ ಮಾತಿನಿಂದ ಕೆಲವರ ಮನಸ್ಸಿಗೆ ನೋವಾಗುವುದು ಸಹಜ. ಹಾಗೆ ನೋವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ’ ಎಂದು ತಿಳಿಸಿದ್ದಾರೆ.

ದಿಲೀಪ್‌ ಹೇಳಿಕೆ ವಿವಾದ ಉಂಟಾದ ಬೆನ್ನಲ್ಲೇ ಬಿಜೆಪಿ ಅವರಿಂದ ವಿವರಣೆ ಕೇಳಿ ನೋಟಿಸ್‌ ನೀಡಿತ್ತು. ಜೊತೆಗೆ ಟಿಎಂಸಿ ಅವರ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.