ಸಾರಾಂಶ
ರಂಗಭೂಮಿಯ ಮೂಲಕ ನಟನೆಯನ್ನು ಪ್ರವೇಶಿಸಿ ಕಿರುತೆರೆ, ಬೆಳ್ಳಿತೆರೆ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಬಾಲಿವುಡ್ ನಟ ರಿತುರಾಜ್ ಸಿಂಗ್ ಹೃದಯ ಸ್ತಂಭನದಿಂದಾಗಿ ತಮ್ಮ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ. ಅವರು ಇತ್ತೀಚೆಗೆ ಉದರ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು.
ಮುಂಬೈ: 1993ರಲ್ಲಿ ಪ್ರಸಾರವಾದ ಬನೇಗಿ ಅಪ್ನಿ ಬಾತ್ ದೂರದರ್ಶನ ಕಾರ್ಯಕ್ರಮದ ಮೂಲಕ ಮನ್ನಣೆ ಗಳಿಸಿದ್ದ ಖ್ಯಾತ ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಯ ಬಾಲಿವುಡ್ ನಟ ರಿತುರಾಜ್ ಸಿಂಗ್ ಹೃದಯ ಸ್ತಂಭನದಿಂದಾಗಿ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಉದರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚೇತರಿಸಿಕೊಂಡ ಕಾರಣ ಕೆಲವೇ ದಿನಗಳ ಮೊದಲು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಅವರು ರಂಗಭೂಮಿಯ ಮೂಲಕ ನಟನಾರಂಗ ಪ್ರವೇಶಿಸಿ ಅನುಪಮಾ, ಹಿಟ್ಲರ್ ದೀದಿ, ಶಪಥ್ ಮುಂತಾದ ಧಾರಾವಾಹಿಗಳಲ್ಲಿ ಕಿರುತೆರೆಯಲ್ಲಿ ನಟಿಸುವ ಜೊತೆಗೆ ಶಾರುಖ್ ಖಾನ್, ವರುಣ್ ಧವನ್ ಜತೆಗೂ ಸಹನಟನಾಗಿ ಅಭಿನಯ ಮಾಡಿದ್ದರು. ಇವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.