ಬಾಲಿವುಡ್‌ ನಟಿ ನೇಹಾ ಶರ್ಮಾ ಲೋಕಸಭೆ ಚುನಾವಣೆಯಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.

ನವದೆಹಲಿ: ಬಾಲಿವುಡ್‌ ನಟಿ ನೇಹಾ ಶರ್ಮಾ ಲೋಕಸಭೆ ಚುನಾವಣೆಯಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಬಿಹಾರದ ಭಾಗಲ್ಪುರದಿಂದ ಅವರು ಸ್ಪರ್ಧಿಸಬಹುದು ಎಂದು ನೇಹಾ ಅವರ ತಂದೆ ಹಾಗೂ ಕಾಂಗ್ರೆಸ್‌ ನಾಯಕ ಅಜಯ್‌ ಶರ್ಮಾ ಸುಳಿವು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಜಯ್‌ ಶರ್ಮಾ, ಈಗಾಗಲೇ ನಾನು ಭಾಗಲ್ಪುರದ ಶಾಸಕರಾಗಿದ್ದು, ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳೊಂದಿಗೆ ಪಕ್ಷದ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ. 

ಭಾಗಲ್ಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನನ್ನ ಮಗಳು ನೇಹಾ ಶರ್ಮಾ ಅವರನ್ನು ಸ್ಪರ್ಧೆಗೆ ಇಳಿಸಲು ಕೇಳಿಕೊಳ್ಳುತ್ತೇನೆ ಎಂದರು.ಏನಾದರೂ ನನ್ನ ಮಗಳಿಗೆ ಸ್ಪರ್ಧೆ ಮಾಡಲು ಅವಕಾಶ ಸಿಕ್ಕರೆ, ನಾವು ಗೆದ್ದೇ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.