ಟ್ರಂಪ್‌ಗೆ ಸಡ್ಡು: ರಷ್ಯಾದಿಂದ ಭಾರತಕ್ಕೆ ಹೆಚ್ಚು ತೈಲ

| N/A | Published : Aug 16 2025, 12:00 AM IST

ಟ್ರಂಪ್‌ಗೆ ಸಡ್ಡು: ರಷ್ಯಾದಿಂದ ಭಾರತಕ್ಕೆ ಹೆಚ್ಚು ತೈಲ
Share this Article
  • FB
  • TW
  • Linkdin
  • Email

ಸಾರಾಂಶ

  ಟ್ರಂಪ್‌ ಶೇ.50 ತೆರಿಗೆ ಹೇರಿರುವ ಹೊರತಾಗಿಯೂ ಆಗಸ್ಟ್‌ನಲ್ಲಿ ಈವರೆಗೆ ಭಾರತವು ನಿತ್ಯ 20 ಲಕ್ಷ ಬ್ಯಾರೆಲ್‌ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಜುಲೈಗಿಂತ 4 ಲಕ್ಷ ಬ್ಯಾರೆಲ್‌ ಅಧಿಕ ಎಂದು ತೈಲ ಅಧ್ಯಯನ ವೇದಿಕೆ ‘ಕೆಪ್ಲರ್‌’ ಹೇಳಿದೆ.

  ನವದೆಹಲಿ :  ರಷ್ಯಾ ಜತೆ ವ್ಯಾಪಾರ ಮಾಡಿದ್ದಕ್ಕೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶೇ.50 ತೆರಿಗೆ ಹೇರಿರುವ ಹೊರತಾಗಿಯೂ ಆಗಸ್ಟ್‌ನಲ್ಲಿ ಈವರೆಗೆ ಭಾರತವು ನಿತ್ಯ 20 ಲಕ್ಷ ಬ್ಯಾರೆಲ್‌ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಜುಲೈಗಿಂತ 4 ಲಕ್ಷ ಬ್ಯಾರೆಲ್‌ ಅಧಿಕ ಎಂದು ತೈಲ ಅಧ್ಯಯನ ವೇದಿಕೆ ‘ಕೆಪ್ಲರ್‌’ ಹೇಳಿದೆ.

ಜುಲೈನಲ್ಲಿ ಪ್ರತಿ ದಿನ 16 ಲಕ್ಷ ಬ್ಯಾರೆಲ್‌ ತರಿಸಿಕೊಳ್ಳುತ್ತಿದ್ದ ಭಾರತ ಆಗಸ್ಟ್‌ನಲ್ಲಿ 20 ಲಕ್ಷ ಬ್ಯಾರಲ್‌ ಆಮದು ಮಾಡಿಕೊಳ್ಳುತ್ತಿದೆ. ಇರಾಕ್, ಸೌದಿ ಅರೇಬಿಯಾದಿಂದ ಖರೀದಿಸುತ್ತಿದ್ದ ತೈಲವನ್ನು ಕಡಿಮೆ ಮಾಡಿ ರಷ್ಯಾದಿಂದ ಹೆಚ್ಚು ಇಂಧನ ಖರೀದಿಸುತ್ತಿದೆ ಎಂದು ಅದು ಹೇಳಿದೆ. ಆಗಸ್ಟ್‌ನಲ್ಲಿ ಭಾರತ ದಿನಕ್ಕೆ 52 ಲಕ್ಷ ಬ್ಯಾರೆಲ್‌ ಇಂಧನದಲ್ಲಿ ರಷ್ಯಾದ ಪಾಲು ಶೇ.38ರಷ್ಟಿದೆ.

ಇನ್ನು ಅಮೆರಿಕವು 5ನೇ ದೊಡ್ಡ ತೈಲು ಪೂರೈಕೆದಾರನಾಗಿದ್ದು, ದಿನಕ್ಕೆ 2.64 ಲಕ್ಷ ಬ್ಯಾರೆಲ್‌ ಪೂರೈಸುತ್ತಿದೆ ಎಂದು ಕೆಪ್ಲರ್‌ ಹೇಳಿದೆ.

Read more Articles on