ಸಾರಾಂಶ
ಪಹಲ್ಗಾಂ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜತೆಗಿನ ಎಲ್ಲಾ ರೀತಿಯ ವ್ಯಾಪಾರವನ್ನು ರದ್ದುಗೊಳಿಸುವುದಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರ್ಧರಿಸಿದೆ. ಜತೆಗೆ, ಇ-ಕಾಮರ್ಸ್ ವ್ಯವಹಾರ ನಿಯಂತ್ರಿಸುವಂತೆಯೂ ಒತ್ತಾಯಿಸಿದೆ.
ನವದೆಹಲಿ: ಪಹಲ್ಗಾಂ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜತೆಗಿನ ಎಲ್ಲಾ ರೀತಿಯ ವ್ಯಾಪಾರವನ್ನು ರದ್ದುಗೊಳಿಸುವುದಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರ್ಧರಿಸಿದೆ. ಜತೆಗೆ, ಇ-ಕಾಮರ್ಸ್ ವ್ಯವಹಾರ ನಿಯಂತ್ರಿಸುವಂತೆಯೂ ಒತ್ತಾಯಿಸಿದೆ.
ಪಹಲ್ಗಾಂನಲ್ಲಿ 26 ಅಮಾಯಕರ ಹತ್ಯೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜತೆಗಿನ ಜತೆಗೆ ಎಲ್ಲಾ ರೀತಿಯ ಆಮದು ಮತ್ತು ರಫ್ತು ವ್ಯವಹಾರ ರದ್ದುಗೊಳಿಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಭುವನೇಶ್ವರದಲ್ಲಿ ನಡೆದ ಒಕ್ಕೂಟದ ಎರಡು ದಿನಗಳ ರಾಷ್ಟ್ರೀಯ ಸಮಿತಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಭಾರತವು 4200 ಕೋಟಿ ರು. ಮೌಲ್ಯದ ರಾಸಾಯನಿಕಗಳು, ಸಕ್ಕರೆ, ಆಟೋ ಬಿಡಿಭಾಗಗಳು ಸೇರಿ ವಿವಿಧ ವಸ್ತುಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಿತ್ತು. ಪಾಕಿಸ್ತಾನದಿಂದ 3.60 ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿತ್ತು.