ಸ್ಪರ್ಧಾತ್ಮಕ ಪರೀಕ್ಷೆ ಸುಧಾರಣೆಗೆ 7 ಸದಸ್ಯರ ಸಮಿತಿ

| Published : Jun 23 2024, 02:04 AM IST / Updated: Jun 23 2024, 04:57 AM IST

Dr K Radhakrishnan
ಸ್ಪರ್ಧಾತ್ಮಕ ಪರೀಕ್ಷೆ ಸುಧಾರಣೆಗೆ 7 ಸದಸ್ಯರ ಸಮಿತಿ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ ಹಾಗೂ ಉಪನ್ಯಾಸಕರ ಅರ್ಹತಾ ಪರೀಕ್ಷೆ ನೆಟ್‌ನಲ್ಲಿ ಭಾರಿ ಅಕ್ರಮಗಳು ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಸುಧಾರಣೆಗೆ  ಕೆ.ರಾಧಾಕೃಷ್ಣನ್‌ ಅಧ್ಯಕ್ಷತೆಯಲ್ಲಿ ಏಳು ಮಂದಿ ತಜ್ಞರ ಉನ್ನತ ಸಮಿತಿಯೊಂದನ್ನು ರಚನೆ ಮಾಡಿದೆ.

 ನವದೆಹಲಿ : ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ ಹಾಗೂ ಉಪನ್ಯಾಸಕರ ಅರ್ಹತಾ ಪರೀಕ್ಷೆ ನೆಟ್‌ನಲ್ಲಿ ಭಾರಿ ಅಕ್ರಮಗಳು ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಸುಧಾರಣೆಗೆ ಇಸ್ರೋದ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್‌ ಅಧ್ಯಕ್ಷತೆಯಲ್ಲಿ ಏಳು ಮಂದಿ ತಜ್ಞರ ಉನ್ನತ ಸಮಿತಿಯೊಂದನ್ನು ರಚನೆ ಮಾಡಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಈ ಸಮಿತಿ ಸಲಹೆ ನೀಡಲಿದೆ.

ಪರೀಕ್ಷಾ ವ್ಯವಸ್ಥೆ, ಪ್ರಶ್ನೆಪತ್ರಿಕೆಗಳ ಗೌಪ್ಯತೆ, ಮೌಲ್ಯಮಾಪನದಲ್ಲಿ ಅಕ್ರಮಗಳು ನಡೆಯದಂತೆ ನೋಡಿಕೊಳ್ಳುವುದು, ದತ್ತಾಂಶಗಳ ನಿರ್ವಹಣೆ, ಎನ್‌ಟಿಎ ಕಾರ್ಯನಿರ್ವಹಿಸುವ ಬಗೆ ಮುಂತಾದ ವಿಷಯಗಳಲ್ಲಿ ಸುಧಾರಣೆ ತರಲು ಏನು ಮಾಡಬೇಕು ಎಂಬ ಬಗ್ಗೆ ಎರಡು ತಿಂಗಳೊಳಗೆ ಶಿಫಾರಸುಗಳನ್ನು ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.

ಕೆ.ರಾಧಾಕೃಷ್ಣನ್ ಜೊತೆಗೆ ಹೈದರಾಬಾದ್‌ ಸೆಂಟ್ರಲ್‌ ವಿವಿ ಕುಲಪತಿ ಪ್ರೊ.ಬಿ.ಜೆ.ರಾವ್‌ ಹಾಗೂ ಏಮ್ಸ್‌ ದೆಹಲಿಯ ಮಾಜಿ ನಿರ್ದೇಶಕ ರಣದೀಪ್‌ ಗುಲೇರಿಯಾ ಮುಂತಾದವರು ಸಮಿತಿಯಲ್ಲಿದ್ದಾರೆ.