ಚಂದ್ರಯಾನ-3 ನೌಕೆ ಇಳಿದ ದಕ್ಷಿಣ ಧ್ರುವ ಪ್ರದೇಶವು 385 ಕೋಟಿ ವರ್ಷ ಹಳೆಯ ಕುಳಿಯ ಸಾಧ್ಯತೆ?

| Published : Sep 30 2024, 01:29 AM IST / Updated: Sep 30 2024, 05:39 AM IST

ಸಾರಾಂಶ

ಚಂದ್ರಯಾನ-3 ನೌಕೆ ಇಳಿದ ದಕ್ಷಿಣ ಧ್ರುವ ಪ್ರದೇಶವು ಚಂದ್ರನ ಅತ್ಯಂತ ಹಳೆಯ ಕುಳಿಯಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಪ್ರಜ್ಞಾನ್‌ ರೋವರ್‌ ಕಳುಹಿಸಿದ್ದ ದತ್ತಾಂಶಗಳ ಪ್ರಕಾರ, ನೌಕೆ ಇಳಿದ ಜಾಗವು ಸುಮಾರು 385 ಕೋಟಿ ವರ್ಷಗಳಷ್ಟು ಹಳೆಯದಾಗಿರಬಹುದು.

ನವದೆಹಲಿ: ಕಳೆದ ವರ್ಷ ಆ.23ರಂದು ಇಸ್ರೋದ ಚಂದ್ರಯಾನ 3 ನೌಕೆ ಇಳಿದ ದಕ್ಷಿಣ ಧ್ರುವ ಪ್ರದೇಶ, ಚಂದ್ರನ ಅತ್ಯಂತ ಹಳೆಯ ಕುಳಿಯಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಚಂದ್ರಯಾನ -3 ನೌಕೆಯ ಭಾಗವಾಗಿದ್ದ ಪ್ರಜ್ಞಾನ್‌ ರೋವರ್‌ ಕಳುಹಿಸಿದ್ದ ದತ್ತಾಂಶಗಳ ಅನ್ವಯ, ನೌಕೆ ಇಳಿದ ಜಾಗವನ್ನು ನೆಕ್ಟೇರಿಯನ್‌ ಪೀರಿಯಡ್‌ ಎಂದು ಗುರುತಿಸಬಹುದು. ಅಂದರೆ 385 ಕೋಟಿ ವರ್ಷಗಳ ಹಿಂದೆ ಈ ಕುಳಿ ನಿರ್ಮಾಣ ಆಗಿರಬಹುದು. 

ಇದು ಚಂದ್ರನ ಇತಿಹಾಸದಲ್ಲೇ ಅತ್ಯಂತ ಹಳೆಯ ಕುಳಿಗಳ ಪೈಕಿ ಒಂದು ಎಂದು ಅಹಮದಾಬಾದ್‌ನ ಇಸ್ರೋದ ವಿಜ್ಞಾನಿಗಳ ತಂಡ ಅಂದಾಜಿಸಿದೆ.

ಕ್ಷುದ್ರಗಳು ಅಪ್ಪಳಿಸಿದ ಕಾರಣ 300 ಕಿ.ಮೀ ಸುತ್ತಳೆಯ ಕುಳಿ ಸೃಷ್ಟಿಯಾಗಿತ್ತು ಎಂದು ವಿಜ್ಞಾನಿಗಳ ತಂಡ ಹೇಳಿದೆ.