ಸಾರಾಂಶ
ಛತ್ತೀಸ್‌ಗಢದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸಮಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ.
ರಾಯ್‌ಪುರ್: ಲೋಕಸಭಾ ಚುನಾವಣೆ ವೇಳೆ ಛತ್ತಿಸ್‌ಗಢದ ಬಿಜಾಪುರ ಜಿಲ್ಲೆಯ ಬಸ್ತಾರ್ ವಿಭಾಗದಲ್ಲಿ ಸಂಭವಿಸಿದ ಪ್ರತ್ಯೇಕ ಸ್ಫೋಟಗಳಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೋಲಿಸ್ ಪಡೆಯ (ಸಿಆರ್‌ಪಿಎಫ್) ಯೋಧರು ಗಾಯಗೊಂಡಿದ್ದಾರೆ.
ಮತದಾನದ ಪ್ರಕ್ರಿಯೆ ವೇಳೆ ಬಿಜಾಪುರದ ಬೈರಾಗರ್‌ನಲ್ಲಿ ಮಾವೋವಾದಿಗಳು ಇಟ್ಟಂತಹ ಐಇಡಿ ಬಾಂಬ್ ಸ್ಫೋಟದಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಒಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಾಗೆಯೇ ಆಕಸ್ಮಿಕವಾಗಿ ಯೋಧನ ಗ್ರೆನೇಡ್ ಲಾಂಚರ್ ಸ್ಫೋಟಗೊಂಡ ಕಾರಣ ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ.
ಇಬ್ಬರನ್ನು ಆಸ್ಪತ್ರೆ ದಾಖಲಿಸಲಾಗಿದೆ.