ಪಹಲ್ಗಾಂ ದಾಳಿಗೆ ಚೀನಿ ಸಾಧನ ಬಳಕೆ !

| N/A | Published : Apr 29 2025, 01:47 AM IST / Updated: Apr 29 2025, 07:13 AM IST

ಸಾರಾಂಶ

ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಇತ್ತೀಚಗೆ ದಾಳಿ ಮಾಡಿದ್ದ ಉಗ್ರರು, ದಾಳಿಯ ಸಂದರ್ಭದಲ್ಲಿ ಭಾರತೀಯ ರಕ್ಷಣಾಪಡೆಗಳ ಕಣ್ತಪ್ಪಿಸಲು ಚೀನಾ ತಂತ್ರಜ್ಞಾನ ಮೊರೆ ಹೋಗಿದ್ದ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಇತ್ತೀಚಗೆ ದಾಳಿ ಮಾಡಿದ್ದ ಉಗ್ರರು, ದಾಳಿಯ ಸಂದರ್ಭದಲ್ಲಿ ಭಾರತೀಯ ರಕ್ಷಣಾಪಡೆಗಳ ಕಣ್ತಪ್ಪಿಸಲು ಚೀನಾ ತಂತ್ರಜ್ಞಾನ ಮೊರೆ ಹೋಗಿದ್ದ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿರುವ ತಮ್ಮ ಸೂತ್ರಧಾರರ ಜತೆಗೆ ಸಂವಹನಕ್ಕೆ ಉಗ್ರರು ಚೀನಾ ಆ್ಯಪ್‌ ಹಾಗೂ ಉಪಕರಣಗಳನ್ನು ಬಳಸಿದ್ದಾರೆಂದು ಎನ್‌ಐಎ ತನಿಖೆ ವೇಳೆಗೆ ಪತ್ತೆಯಾಗಿದೆ.

ಅದರಲ್ಲೂ ಗೂಢಚರ್ಯೆ ಆರೋಪಕ್ಕಾಗಿ ಭಾರತದಿಂದ ಭಾಗಶಃ ನಿಷೇಧಕ್ಕೆ ಒಳಗಾಗಿರುವ ಚೀನಾದ ಹುವಾಯ್ ಕಂಪನಿಗಳ ಉತ್ಪನ್ನಗಳನ್ನು ಬಳಸಲಾಗಿದೆ ಎನ್ನಲಾಗಿದೆ.

ಗಲ್ವಾನ್‌ ಗಲಾಟೆ ಬಳಿಕ 2020ರಲ್ಲಿ ಚೀನಾದ ಈ ಆ್ಯಪ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಸಂಪೂರ್ಣವಾಗಿ ಎನ್‌ಕ್ರಿಪ್ಟ್‌ ಆಗಿರುವ ಈ ಆ್ಯಪ್‌ಗಳನ್ನು ಬಳಸಿಕೊಂಡು ಇದೀಗ ಉಗ್ರರು ದಾಳಿ ವೇಳೆ ಸಂವಹನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಯ ದಿನ ಚೀನಾ ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿರುವುದೂ ತನಿಖೆ ವೇಳೆ ಪತ್ತೆಯಾಗಿದೆ.

ಚೀನಾವು ಈಗಾಗಲೇ ಪಾಕಿಸ್ತಾನಕ್ಕೆ ತನ್ನ ಬೆಂಬಲ ಘೋಷಿಸಿದೆ. ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್‌ ಇಷಾಕ್‌ ದಾರ್‌ ಅವರಿಗೆ ಕರೆ ಮಾಡಿ ನಿಷ್ಪಕ್ಷಪಾತ ತನಿಖೆಗೂ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಈ ಚೀನಾ ತಂತ್ರಜ್ಞಾನವು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ ಹೊಂದಿದ್ದು, ಮೂರನೇ ವ್ಯಕ್ತಿಗೆ ಡಿಕೋಡ್‌ ಮಾಡಲು ಅಸಾಧ್ಯವಾಗಿದೆ. ಕ್ವಾಂಟಂ ಕಂಪ್ಯೂಟರ್‌ಗಳು ಹಾಗೂ ಸ್ಟೆಗ್ನೋಗ್ರಫಿಯಿಂದಲೂ ಭೇದಿಸಲಾಗದ ಅಲ್ಗೋರಿದಂಗಳನ್ನು ಈ ತಂತ್ರಜ್ಞಾನ ಹೊಂದಿದೆ.

- ಗಲ್ವಾನ್‌ ಸಂಘರ್ಷದ ಬಳಿಕ ಚೀನಾ ಆ್ಯಪ್‌ಗಳಿಗೆ ಭಾರತ ನಿರ್ಬಂಧಿಸಿತ್ತು

- ಆದರೆ ಈಗ ಸೂತ್ರಧಾರರ ಜತೆಗೆ ಚೀನಾ ಆ್ಯಪ್‌ ಬಳಸಿ ಉಗ್ರರ ಸಂವಹನ

- ಈ ಆ್ಯಪ್‌ ಬಳಸಿದರೆ ಸಂವಹನದ ಮಾಹಿತಿ, ಮೂಲ ಪತ್ತೆ ಮಾಡಲಾಗದು

- ಎನ್‌ಐಎ ತನಿಖೆ ವೇಳೆ ಪಾಕ್‌ ಉಗ್ರರ ಕಿರಾತಕ ಕೃತ್ಯಗಳು ಬಹಿರಂಗ

ಭಾರತದ ದಾಳಿ ಭೀತಿ: ಉಗ್ರರಿಗೆಬಂಕರಲ್ಲಿ ರಕ್ಷಣೆ! ಇಸ್ಲಾಮಾಬಾದ್‌: ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಯಾವುದೇ ಸಮಯದಲ್ಲಿ ಭಾರತದ ದಾಳಿ ಬಹುತೇಕ ಖಚಿತ ಎಂದು ನಂಬಿರುವ ಪಾಕಿಸ್ತಾನ, ತಾನು ಅಕ್ರಮಿಸಿಕೊಂಡಿರುವ ಕಾಶ್ಮೀರದ ಉಗ್ರ ನೆಲೆಗಳಲ್ಲಿ ಇರುವ ಉಗ್ರರಿಗೆ ಬಂಕರ್‌ಗಳಲ್ಲಿ ರಕ್ಷಣೆ ನೀಡಿದೆ ಎಂದು ವರದಿಗಳು ತಿಳಿಸಿವೆ.

 ಅಸ್ತಿತ್ವ ಕುತ್ತು

ಬಂದರೆ ಅಣ್ವಸ್ತ್ರ

ದಾಳಿ: ಪಾಕ್‌

ಇಸ್ಲಾಮಾಬಾದ್: ‘ಪಹಲ್ಗಾಂ ದಾಳಿ ಘಟನೆಗೆ ಪ್ರತೀಕಾರವಾಗಿ ಪಾಕ್‌ ಮೇಲೆ ಭಾರತದ ದಾಳಿ ಖಚಿತವಾಗಿದೆ. ಹೀಗಾಗಿ ಗಡಿಯಲ್ಲಿ ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ. ನಮ್ಮ ಅಸ್ತಿತ್ವಕ್ಕೇ ಧಕ್ಕೆ ಬಂದರೆ ಅಣ್ವಸ್ತ್ರ ದಾಳಿಗೂ ಸಿದ್ಧರಿದ್ದೇವೆ’ ಎಂದು ಸ್ವತಃ ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಹೇಳಿದ್ದಾರೆ.--16 ಪಾಕಿಸ್ತಾನಿಯೂಟ್ಯೂಬ್‌ಚಾನೆಲ್‌ ನಿಷೇಧನವದೆಹಲಿ: ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಕಠಿಣ ಹೆಜ್ಜೆಗಳನ್ನಿಡುತ್ತಿರುವ ಭಾರತ ಮತ್ತೊಂದು ನಿರ್ಧಾರ ಕೈಗೊಂಡಿದೆ. ಸುಳ್ಳು, ಪ್ರಚೋದಕ ಮತ್ತು ಕೋಮು ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಡಾನ್‌ ನ್ಯೂಸ್‌ ಸೇರಿ ಪಾಕಿಸ್ತಾನದ 16 ಯೂಟ್ಯೂಬ್‌ ಚಾನೆಲ್‌ಗಳನ್ನು ನಿಷೇಧಿಸಿದೆ.