ಸಾರಾಂಶ
ದೋಹಾ: ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಶುಕ್ರವಾರ ಇಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಅಥ್ಲೆಟಿಕ್ಸ್ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಋತುವನ್ನು ಉತ್ತಮ ಪ್ರದರ್ಶನದೊಂದಿಗೆ ಆರಂಭಿಸಲು ಎದುರು ನೋಡುತ್ತಿರುವ ನೀರಜ್, ಈ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಲಿದ್ದಾರೆ. ಕೂಟದಲ್ಲಿ ನೀರಜ್‌ಗೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಜಾವೆಲಿನ್ ಥ್ರೋನಲ್ಲಿ ಒಟ್ಟು 11 ಸ್ಪರ್ಧಿಗಳು ಭಾಗವಹಿಸಲಿದ್ದು, ಭಾರತದ ಮತ್ತೊಬ್ಬ ಅಥ್ಲೀಟ್ ಕಿಶೋರ್ ಜೆನಾ ಕೂಡ ಕಣಕ್ಕಿಳಿಯಲಿದ್ದಾರೆ.
ಟೆಸ್ಟ್ ವಿಶ್ವಕಪ್ ಗೆಲ್ಲುವ
ತಂಡಕ್ಕೆ ₹30.78 ಕೋಟಿ!
- ಬಹುಮಾನ ಮೊತ್ತ ಭಾರೀ ಪ್ರಮಾಣದಲ್ಲಿ ಏರಿಕೆದುಬೈ: ಈ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ತಂಡಕ್ಕೆ ಬರೋಬ್ಬರಿ 3.6 ಮಿಲಿಯರ್ ಡಾಲರ್ (ಅಂದಾಜು 30.78 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ಗುರುವಾರ ಐಸಿಸಿ ಅಧ್ಯಕ್ಷ ಜಯ್ ಶಾ, ಬಹುಮಾನ ಮೊತ್ತವನ್ನು ಹೆಚ್ಚಳ ಮಾಡಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ಪ್ರಶಸ್ತಿ ಮೊತ್ತ 17 ಕೋಟಿ ರು. ಏರಿಕೆಯಾಗಿದೆ. 2023ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆದಾಗ ತಂಡಕ್ಕೆ 1.6 ಮಿಲಿಯನ್ ಡಾಲರ್ (ಅಂದಾಜು 13.68 ಕೋಟಿ ರು.) ಬಹುಮಾನ ಸಿಕ್ಕಿತ್ತು.ಇದೇ ವೇಳೆ ರನ್ನರ್-ಅಪ್ ಆಗುವ ತಂಡಕ್ಕೆ 2.16 ಮಿಲಿಯನ್ ಡಾಲರ್ (ಅಂದಾಜು 18.47 ಕೋಟಿ ರು.) ಸಿಗಲಿದೆ. ಜೂ.11ರಿಂದ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ವಿಶ್ವಕಪ್‌ಗಾಗಿ ಸೆಣಸಲಿವೆ.
ಇನ್ನು, 2023ರಿಂದ 2025ರ ಐಸಿಸಿ ಟೆಸ್ಟ್ ವಿಶ್ಚ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಭಾರತಕ್ಕೆ 12.31 ಕೋಟಿ ರು., 4ನೇ ಸ್ಥಾನಿಯಾದ ನ್ಯೂಜಿಲೆಂಡ್‌ಗೆ 10.26 ಕೋಟಿ, 5ನೇ ಸ್ಥಾನ ಪಡೆದ ಇಂಗ್ಲೆಂಡ್‌ಗೆ 8.2 ಕೋಟಿ ರು. ಸಿಗಲಿದೆ. ನಂತರದ ಸ್ಥಾನ ಪಡೆದ ಶ್ರೀಲಂಕಾ, ಬಾಂಗ್ಲಾ, ವಿಂಡೀಸ್ ಹಾಗೂ ಪಾಕಿಸ್ತಾನಕ್ಕೆ ಕ್ರಮವಾಗಿ 7.18 ಕೋಟಿ ರು., 6.15 ಕೋಟಿ ರು., 5.13 ಕೋಟಿ ರು., ಹಾಗೂ 4.10 ಕೋಟಿ ರು. ಸಿಗಲಿದೆ.