ಸಾರಾಂಶ
‘ವಕ್ಫ್ ತಿದ್ದುಪಡಿ ಮಸೂದೆಯಿಂದ ಯಾರಿಗೂ ಅನ್ಯಾಯವಾಗಲ್ಲ. ಇದು ಸಂಸತ್ತಿನಲ್ಲಿ ಜಾತ್ಯಾತೀತ ತೆಯ ಕಠಿಣ ಪರೀಕ್ಷೆ. ರಾಜ್ಯದ ಸಂಸದರು ಇದಕ್ಕೆ ಬೆಂಬಲಿಸಬೇಕು. ಇಲ್ಲದಿದ್ದರೆ ಅವರ ಧಾರ್ಮಿಕ ಮೂಲಭೂತವಾದ ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ಕೇರಳದಲ್ಲಿ ಚರ್ಚ್‌ವೊಂದು ಎಚ್ಚರಿಸಿದೆ.
ತಿರುವನಂತಪುರಂ: ‘ವಕ್ಫ್ ತಿದ್ದುಪಡಿ ಮಸೂದೆಯಿಂದ ಯಾರಿಗೂ ಅನ್ಯಾಯವಾಗಲ್ಲ. ಇದು ಸಂಸತ್ತಿನಲ್ಲಿ ಜಾತ್ಯಾತೀತ ತೆಯ ಕಠಿಣ ಪರೀಕ್ಷೆ. ರಾಜ್ಯದ ಸಂಸದರು ಇದಕ್ಕೆ ಬೆಂಬಲಿಸಬೇಕು. ಇಲ್ಲದಿದ್ದರೆ ಅವರ ಧಾರ್ಮಿಕ ಮೂಲಭೂತವಾದ ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ಕೇರಳದಲ್ಲಿ ಚರ್ಚ್‌ವೊಂದು ನಡೆಸುತ್ತಿರುವ ಪತ್ರಿಕೆಯೊಂದು ಎಚ್ಚರಿಸಿದೆ.
ದೀಪಿಕಾ ಎನ್ನುವ ದಿನಪತ್ರಿಕೆ ಕೇಂದ್ರ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾಗಿರುವ ಹೊತ್ತಲ್ಲಿ ತನ್ನ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದುಕೊಂಡಿದೆ. ‘ವಕ್ಫ್ ತಿದ್ದುಪಡಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯವಿದು. ವಕ್ಫ್ ಕಾನೂನು ರದ್ದುಗೊಳಿಸುವುದು ಬೇಡಿಕೆಯಲ್ಲ. ಬದಲಾಗಿ ನಿಬಂಧನೆಗಳನ್ನು ತಿದ್ದುಪಡಿ ಮಾಡುವುದು ಬೇಡಿಕೆ.
ಇದರಿಂದ ಮುಸ್ಲಿಂಮರಿಗೆ ಅನ್ಯಾಯವಾಗಲ್ಲ. ಈ ಕಾನೂನು ಸಾವಿರಾರು ಹಿಂದೂ, ಕ್ರೈಸ್ತ ಮತ್ತು ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುತ್ತದೆ, ಕಾಂಗ್ರೆಸ್ ಮತ್ತು ಸಿಪಿಎಂ ಇದನ್ನು ಅರ್ಥೈಸಲು ವಿಫಲವಾದರೆ ಏನೂ ಹೇಳಲು ಸಾಧ್ಯವಿಲ್ಲ. ವಕ್ಪ್ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಜಾತ್ಯಾತೀ ತತೆಯ ಪರೀಕ್ಷೆ. ನೀವು ಅದನ್ನು ಬೆಂಬಲಿಸುತ್ತಿರೋ, ಇಲ್ಲವೋ, ಅದರ ಅಂಗೀಕಾರ ಬೇರೆ ವಿಷಯ, ಆದರೆ ನೀವು ಅದನ್ನು ಬೆಂಬಲಿಸದಿದ್ದರೆ ಕೇರಳ ಸಂಸದರ ಧಾರ್ಮಿಕ ಮೂಲಭೂತವಾದಿ ನಿಲುವು ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ಬರೆದಿದೆ.