ಸಾರಾಂಶ
ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ಪಟಾಕಿ ಸಂಗ್ರಹ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಆಮ್‌ಆದ್ಮಿ ಸರ್ಕಾರ ಆದೇಶ ಹೊರಡಿಸಿದೆ
ನವದೆಹಲಿ: ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಜಾರಿಗೆ ಬರುವಂತೆ ದೆಹಲಿಯಲ್ಲಿ ಪಟಾಕಿ ಸಂಗ್ರಹ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಆಮ್‌ಆದ್ಮಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ, ‘ಚಳಿಗಾಲದಲ್ಲಿ ಮಾಲಿನ್ಯ ಅಧಿಕವಾಗುವುದನ್ನು ಗಮನದಲ್ಲಿಟ್ಟುಕೊಂಡು, ಜ.1ರ ವರೆಗೆ ಜಾರಿಯಲ್ಲಿರುವಂತೆ ಪಟಾಕಿ ನಿಷೇಧಿಸಲಾಗಿದೆ. ಇದಕ್ಕೆ ದೆಹಲಿ ನಿವಾಸಿಗಳ ಸಹಕಾರ ಅಗತ್ಯ’ ಎಂದಿದ್ದಾರೆ.
ಈ ಸಂಬಂಧ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ವಿವರವಾದ ಸೂಚನೆ ನೀಡಿದೆ. ಈ ನಿಷೇಧವು ಆನ್‌ಲೈನ್‌ನಲ್ಲಿ ಲಭ್ಯವಿರುವ ಪಟಾಕಿಗಳು ಸೇರಿದಂತೆ ಎಲ್ಲದಕ್ಕೂ ಅನ್ವಯಿಸಲಿದ್ದು, ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು.
ದೆಹಲಿಯ ವಾಯು ಗುಣಮಟ್ಟ ಕಳಪೆಯಾಗಿದ್ದು, ಚಳಿಗಾಲದಲ್ಲಿ ಇದು ಇನ್ನಷ್ಟು ಹೆಚ್ಚಾಗಿ ತಾಪಮಾನದ ಇಳಿಕೆಗೆ ಕಾರಣವಾಗುವುದು. ಇದನ್ನು ತಡೆಗಟ್ಟಲು ಸರ್ಕಾರ ಯೋಜನೆಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.