ಬಿಜೆಪಿಯ ಜಾಹೀರಾತು ವಿರುದ್ಧ ಆಯೋಗಕ್ಕೆ ಕಾಂಗ್ರೆಸ್‌ ದೂರು

| Published : Apr 03 2024, 01:38 AM IST / Updated: Apr 03 2024, 05:32 AM IST

ಸಾರಾಂಶ

ಚುನಾವಣಾ ಪ್ರಚಾರದ ಭಾಗವಾಗಿ ಬಿಜೆಪಿ ಪ್ರಸಾರ ಮಾಡುತ್ತಿರುವ ಜಾಹೀರಾತಿನ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ಸಲ್ಲಿಸಿದೆ.

ದೆಹಲಿ: ಚುನಾವಣಾ ಪ್ರಚಾರದ ಭಾಗವಾಗಿ ಬಿಜೆಪಿ ಪ್ರಸಾರ ಮಾಡುತ್ತಿರುವ ಜಾಹೀರಾತಿನ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ಸಲ್ಲಿಸಿದೆ. 

ತಿರುಚಲಾದ ಮತ್ತು ಆಯ್ದ ಭಾಗಗಳನ್ನೇ ಬಳಸಿಕೊಂಡು ರೂಪಿಸಲಾದ ಈ ಜಾಹೀರಾತುಗಳು ವಿಪಕ್ಷಗಳಿಗೆ ಮಸಿ ಬಳಿಯುವ ಉದ್ದೇಶ ಹೊಂದಿದೆ. ಅಲ್ಲದೆ ಶ್ರೀಮಂತ ಉದ್ಯಮಿ ಜಾರ್ಜ್‌ ಸೊರೊಸ್‌ ಜೊತೆ ಕಾಂಗ್ರೆಸ್‌ ಹೆಸರು ಸೇರಿಸುವ ಮೂಲಕ ಪಕ್ಷಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದೆ. ಹೀಗಾಗಿ ಈ ಜಾಹೀರಾತನ್ನು ಸಿದ್ಧಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಚುನಾವಣಾ ಅಯೋಗಕ್ಕೆ ಮನವಿ ಮಾಡಿಕೊಂಡಿದೆ.