ಸಾರಾಂಶ
ಕಾಂಗ್ರೆಸ್ ಪಕ್ಷ 1951ರ ನಂತರ ಅತಿ ಕಡಿಮೆ ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಈ ಸಲ 300ಕ್ಕಿಂತ ಕಮ್ಮಿ ಸ್ಥಾನದಲ್ಲಿ ಅದು ಕಣಕ್ಕಿಳಿಯುವುದು ಪಕ್ಕಾ ಆಗಿದೆ.
ನವದೆಹಲಿ: ಕಾಂಗ್ರೆಸ್ ಪಕ್ಷ 1951ರ ನಂತರ ಅತಿ ಕಡಿಮೆ ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಈ ಸಲ 300ಕ್ಕಿಂತ ಕಮ್ಮಿ ಸ್ಥಾನದಲ್ಲಿ ಅದು ಕಣಕ್ಕಿಳಿಯುವುದು ಪಕ್ಕಾ ಆಗಿದೆ.
ಈಗಾಗಲೇ 278 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಇನ್ನು 20 ಕ್ಷೇತ್ರಗಳಲ್ಲಿ ಘೋಷಣೆ ಮಾತ್ರ ಬಾಕಿ ಇದೆ. ಉಳಿದ ಸ್ಥಾನಗಳನ್ನು ಇಂಡಿಯಾ ಕೂಟದ ಪಕ್ಷಗಳ ತೆಕ್ಕೆಗೆ ನೀಡಿದೆ. ಹೀಗಾಗಿ 300ಕ್ಕಿಂತ ಕಮ್ಮಿ ಸ್ಥಾನದಲ್ಲಿ ಅದರ ಸ್ಪರ್ಧೆ ಪಕ್ಕಾ ಆಗಿದೆ.
ಈ ಹಿಂದೆಂದೂ ಇಷ್ಟು ಕಮ್ಮಿ ಸ್ಥಾನದಲ್ಲಿ ಅದು ಸ್ಪರ್ಧಿಸಿರಲಿಲ್ಲ. 1989ರಲ್ಲಿ 510, 1991ರಲ್ಲಿ 487, 1996ರಲ್ಲಿ 529, 1998ರಲ್ಲಿ 477, 1999ರಲ್ಲಿ 450, 2004ರಲ್ಲಿ 417, 2009ರಲ್ಲಿ 440, 214ರಲ್ಲಿ 464 ಹಾಗೂ 2019ರಲ್ಲಿ 421ರಲ್ಲಿ ಸ್ಪರ್ಧಿಸಿತ್ತು.
ಬಿಜೆಪಿ ದಾಖಲೆಯ 446ರಲ್ಲಿ:
ಆದರೆ ಬಿಜೆಪಿ ಈ ಸಲ 446 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದು ಈವರೆಗಿನ ದಾಖಲೆಯಾಗಿದೆ.