ಸಾರಾಂಶ
ಹರ್ಯಾಣದಲ್ಲಿ ರೈತ ಹೋರಾಟದಿಂದ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಸಿದ್ದೆವು. ಆದರೆ ರಾಜ್ಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಎಲ್ಲ ಅವಕಾಶ ಹಾಳು ಮಾಡಿದರು
ಕುರುಕ್ಷೇತ್ರ : ‘ಹರ್ಯಾಣದಲ್ಲಿ ರೈತ ಹೋರಾಟದಿಂದ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಸಿದ್ದೆವು. ಆದರೆ ರಾಜ್ಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಎಲ್ಲ ಅವಕಾಶ ಹಾಳು ಮಾಡಿದರು. ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಹೂಡಾ ಕಾರಣ’ ಎಂದು 3 ಕೃಷಿ ಕಾಯ್ದೆ ವಿರುದ್ಧ ಹೋರಾಟದ ಮುಂಚೂಣಿಯಲ್ಲಿದ್ದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ಗುರ್ನಾಮ್ ಸಿಂಗ್ ಚರುನಿ ಕಿಡಿಕಾರಿದ್ದಾರೆ.
‘ಮೋದಿ ಸರ್ಕಾರ ಜಾರಿಗೆ ತಂದಿದ್ದ 3 ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕು ಇತ್ತು’ ಎಂದು ಬಿಜೆಪಿ ನಾಯಕರು ಆರೋಪಿಸುತ್ತಲೇ ಇದ್ದರು. ಇದಕ್ಕೆ ಪುಷ್ಟಿ ನೀಡುವಂಥ ಹೇಳಿಕೆಯನ್ನು ಚುರುನಿ ನೀಡಿದ್ದಾರೆ. ಭಾನುವಾರ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಅವರು, ‘ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಹೂಡಾರೇ ಕಾರಣ. ಅವರು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಎಲ್ಲ ನಿರ್ಧಾರವನ್ನು ಒಬ್ಬರೇ ತೆಗೆದುಕೊಳ್ಳುತ್ತಿದ್ದರು.
ಭೂಪಿಂದರ್ ಸಿಂಗ್ ಹೂಡಾ ಅಲ್ಲ, ಒಂದು ದಶಕದೀಚೆಗೆ ರೈತ ಸಂಘಟನೆಗಳು ಹರ್ಯಾಣದಲ್ಲಿ ವಿಪಕ್ಷ ಸ್ಥಾನವನ್ನು ತುಂಬಿದ್ದವು. ನಮ್ಮ ಕಾರಣದಿಂದ ಹರ್ಯಾಣದಲ್ಲಿ ಕಾಂಗ್ರೆಸ್ ಪರ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಅದನ್ನು ಕಾಂಗ್ರೆಸ್ ಬಳಸಿಕೊಳ್ಳಲಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.+ ‘ಹೀಗಾಗಿ ಇನ್ನು ಮುಂದೆ ಹೂಡಾಗೆ ವಿಪಕ್ಷ ನಾಯಕ ಸ್ಥಾನವನ್ನಾಗಲಿ ಅಥವಾ ಯಾವುದೇ ಉತ್ತಮ ಸ್ಥಾನವನ್ನಾಗಲಿ ನೀಡಬಾರದು’ ಎಂದು ಕಾಂಗ್ರೆಸ್‌ಗೆ ಅಗ್ರಹಿಸಿದರು.
ಪ್ರಿಯಾಂಕಾಗೆ ನಾಯಕತ್ವ ನೀಡಿ: ಇದೇ ವೇಳೆ ‘ಕಾಂಗ್ರೆಸ್ ನಾಯಕತ್ವವನ್ನು ರಾಹುಲ್ ಗಾಂಧಿ ಬದಲು ಪ್ರಿಯಾಂಕಾ ಗಾಂಧಿ ಅವರಿಗೆ ನೀಡಬೇಕು. ಆಗ ಕಾಂಗ್ರೆಸ್ ಉಳಿಯಲು ಸಾಧ್ಯ’ ಎಂದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))