ಕಾಂಗ್ರೆಸ್ ಸಮಾವೇಶಕ್ಕೆ ಭಾರೀ ಬಿಗಿ ಭದ್ರತೆ
Dec 05 2024, 12:33 AM ISTಹಾಸನ ನಗರದ ಹೊರವಲಯದ ಕೃಷ್ಣ ನಗರದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆದಿಯಾಗಿ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಪೊಲೀಸ್ ಇಲಾಖೆಯಿಂದ ಐವರು ಎಸ್ಪಿ, ಆರು ಎಎಸ್ಪಿ, ೧೨ ಡಿವೈಎಸ್ಪಿ, ೩೦ಕ್ಕೂ ಹೆಚ್ಚು ಇನ್ಸ್ಪೆಕ್ಟರ್, ೮೦ಕ್ಕೂ ಹೆಚ್ಚು ಪಿಎಸ್ಐ ಹಾಗೂ ಸುಮಾರು ೨೦೦೦ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿ ಭದ್ರತೆ ವ್ಯವಸ್ಥೆ ಕೊಡಲಾಗಿದೆ.