ಸಿಜೆಐ ಮೇಲೆ ಶೂ ಎಸೆತ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Oct 10 2025, 01:00 AM ISTಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆ ಖಂಡಿಸಿ ಹಾಸನ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು “ನ್ಯಾಯದ ಗೌರವ ಕಾಪಾಡಿ” ಎಂಬ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ರಾಕೇಶ್ ಕಿಶೋರ್ ಅವರ ಈ ನಡೆ ಕಾನೂನು ವೃತ್ತಿಯ ಮಾನಹಾನಿಗೆ ಕಾರಣವಾಗಿದ್ದು, ನ್ಯಾಯಾಂಗದ ಗೌರವವನ್ನು ಹಾಳು ಮಾಡುವ ಕಾರ್ಯ ಎಂದು ಆರೋಪಿಸಿದರು. ಅಂತಹ ವರ್ತನೆಗೆ ತಕ್ಕ ಶಿಕ್ಷೆ ನೀಡುವ ಮೂಲಕ ನ್ಯಾಯಾಂಗದ ಗೌರವವನ್ನು ಉಳಿಸಬೇಕೆಂದು ಅವರು ಆಗ್ರಹಿಸಿದರು.