ದಂಗಲ್‌ ಖ್ಯಾತಿಯ ಬಾಲ ನಟಿ ಸುಹಾನಿ ದಿಢೀರ್‌ ಸಾವು

| Published : Feb 18 2024, 01:32 AM IST / Updated: Feb 18 2024, 03:14 PM IST

ಸಾರಾಂಶ

ದಂಗಲ್‌ ಚಿತ್ರದಲ್ಲಿ ಬಾಲನಟಿಯ ಪಾತ್ರ ಮಾಡಿ ಖ್ಯಾತಿ ಗಳಿಸಿದ್ದ ಸುಹಾನಿ ದಿಢೀರ್‌ ಸಾವನ್ನಪ್ಪಿದ್ದಾರೆ.

ನವದೆಹಲಿ: ಅಮಿರ್‌ ಖಾನ್‌ ನಟನೆಯ ಜನಪ್ರಿಯ ‘ದಂಗಲ್‌’ ಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಸುಹಾನಿ ಭಟ್ನಾಗರ್‌ (19) ಶನಿವಾರ ಸಾವನ್ನಪ್ಪಿದ್ದಾರೆ.

ಸಾವಿಗೆ ನಿಖರ ಕಾರಣ ಬಹಿರಂಗಪಡಿಸಿಲ್ಲ. ಆದರೆ ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಅದರ ಅಡ್ಡಪರಿಣಾಮಗಳಿಂದ ನಲುಗಿದ್ದ ಸುಹಾನಿ ಅದೇ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಹಾನಿ, ದಂಗಲ್‌ ಚಿತ್ರದಲ್ಲಿ ಬಬಿತಾ ಕುಮಾರಿ ಫೋಗಟ್‌ ಬಾಲಕಿಯಾಗಿದ್ದಾಗಿನ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ತಮ್ಮ ವ್ಯಾಸಂಗದ ಮೇಲೆ ಗಮನಹರಿಸಲು ಚಿತ್ರರಂಗದಿಂದ ಹೊರಗುಳಿದಿದ್ದರು.