ಸಾರಾಂಶ
ದೀಪಿಕಾ ಪಡುಕೋಣೆ ಎರಡು ತಿಂಗಳ ಗರ್ಭಿಣಿಯಾಗಿರಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದು, ರಣವೀರ್ ದೀಪಿಕಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ದಿ ವೀಕ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಂಬೈ: ಬಾಲಿವುಡ್‌ನ ಖ್ಯಾತ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
‘ನಟಿ ದೀಪಿಕಾ ತಾಯಿಯಾಗುತ್ತಿದ್ದು, ಅವರು 2 ತಿಂಗಳ ಗರ್ಭಿಣಿಯಾಗಿದ್ದಾರೆ’ ಎಂದು ‘ದಿ ವೀಕ್’ ವರದಿ ಹೇಳಿದೆ. 2018ರ ನವೆಂಬರ್‌ನಲ್ಲಿ ದೀಪಿಕಾ, ರಣವೀರ್ ವಿವಾಹವಾಗಿದ್ದರು.
ಇತ್ತೀಚೆಗಷ್ಟೇ ‘ದಿ ವೈಟ್ ಲೋಟಸ್’ ಸೀಸನ್ 3 ಕಾರ್ಯಕ್ರಮದಿಂದ ದೀಪಿಕಾ ಹೊರಗುಳಿದಿದ್ದರು. ಕಳೆದ ತಿಂಗಳು ದೀಪಿಕಾ, ‘ಫೈಟರ್’ ಚಿತ್ರದ ಪ್ರಚಾರದ ಫೋಟೋಗಳನ್ನು ಹಂಚಿಕೊಂಡಾಗ ಕೂಡ ಅಭಿಮಾನಿಗಳು, ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂದಿದ್ದರು.
ಜೊತೆಗೆ ಸೋಮವಾರ ಲಂಡನ್‌ನಲ್ಲಿ ನಡೆದ ಬ್ರಿಟಿಷ್ ಅಕಾಡೆಮಿ ಪ್ರಶಸ್ತಿ ವಿತರಣಾ ಸಮಾರಂಭಕ್ಕೂ ಸೀರೆ ಉಟ್ಟು ಭಾಗಿಯಾಗಿ ಗಮನ ಸೆಳೆದಿದ್ದರು.
ಅಲ್ಲದೇ ಇತ್ತೀಚಿನ ಸಂದರ್ಶನವೊಂದರಲ್ಲಿ ‘ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ಎದುರು ನೋಡುತ್ತಿದ್ದೇವೆ’ ಎಂದಿದ್ದರು.