ನ . 1ರಂದು ವಾಯು ಗುಣಮಟ್ಟದಲ್ಲಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ

| Published : Nov 02 2024, 01:22 AM IST / Updated: Nov 02 2024, 04:55 AM IST

ಸಾರಾಂಶ

ದೀಪಾವಳಿ ವೇಳೆ ಪಟಾಕಿಗೆ ನಿರ್ಬಂಧ ಇದ್ದರೂ ದಿಲ್ಲಿ ಜನರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಇದರ ಪರಿಣಾಮ, ನ.1ರಂದು ವಾಯುಗುಣಮಟ್ಟದಲ್ಲಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಹೊತ್ತಿದೆ.

ನವದೆಹಲಿ: ದೀಪಾವಳಿ ವೇಳೆ ಪಟಾಕಿಗೆ ನಿರ್ಬಂಧ ಇದ್ದರೂ ದಿಲ್ಲಿ ಜನರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಇದರ ಪರಿಣಾಮ, ನ.1ರಂದು ವಾಯುಗುಣಮಟ್ಟದಲ್ಲಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಹೊತ್ತಿದೆ. 

ಸ್ವಿಸ್ ಸಂಸ್ಥೆಯು ವಾಯು ಗುಣಮಟ್ಟ ಸೂಚ್ಯಂಕವನ್ನು ಪ್ರಕಟಿಸಿದೆ. ಆಗ ವಿಶ್ವದ ಟಾಪ್‌ 10 ಕಲುಷಿತ ನಗರಗಳ ಪಟ್ಟಿಯಲ್ಲಿ ದಿಲ್ಲಿ ಅಗ್ರಸ್ಥಾನದಲ್ಲಿದ್ದು, ಅಲ್ಲಿ ವಾಯು ಗುಣಮಟ್ಟ ಸೂಚ್ಯಂಕ ‘ಅತಿ ಕಳಪೆ’ಯಾದ 388 ತಲುಪಿದೆ.

 ಪಾಕಿಸ್ತಾನದ ಲಾಹೋರ್‌ 2 ಹಾಗೂ ಬೀಜಿಂಗ್‌ 3ನೇ ಸ್ಥಾನದಲ್ಲಿವೆ ಈ ಪಟ್ಟಿಯಲ್ಲಿ ವಾಣಿಜ್ಯ ನಗರಿ ಮುಂಬೈ ಕೂಡ ಸ್ಥಾನ ಪಡೆದಿದ್ದು, 6ನೇ ಸ್ಥಾನದಲ್ಲಿದೆ.ವಾಯು ಗುಣಮಟ್ಟ ಸೂಚ್ಯಂಕವನ್ನು 0 ರಿಂದ 50 ರವರೆಗೆ ಉತ್ತಮವಾಗಿದೆ. 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ಅತಿ ಕಳಪೆ ಎಂದು ಪರಿಗಣಿಸಲಾಗುತ್ತದೆ.