ನೂತನ ಕ್ರಿಮಿನಲ್‌ ಕಾಯ್ದೆ ರಚಿಸಿದ್ದು ಪಾರ್ಟ್‌ ಟೈಮರ್‌ಗಳು: ಚಿದಂಬರಂ

| Published : Jul 07 2024, 01:18 AM IST / Updated: Jul 07 2024, 05:51 AM IST

ನೂತನ ಕ್ರಿಮಿನಲ್‌ ಕಾಯ್ದೆ ರಚಿಸಿದ್ದು ಪಾರ್ಟ್‌ ಟೈಮರ್‌ಗಳು: ಚಿದಂಬರಂ
Share this Article
  • FB
  • TW
  • Linkdin
  • Email

ಸಾರಾಂಶ

‘ಕೇಂದ್ರ ಸರ್ಕಾರ ಇತ್ತೀಚೆಗೆ ದೇಶವ್ಯಾಪಿ ಜಾರಿಗೆ ತಂದ ನೂತನ ಕ್ರಿಮಿನಲ್‌ ಕಾಯ್ದೆಗಳನ್ನು ರಚಿಸಿದ್ದು ಪಾರ್ಟ್‌ ಟೈಮರ್‌ಗಳು (ಅರೆಕಾಲಿಕರ)’ ಎಂದು ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯಸಭಾ ಸಂಸದ ಪಿ.ಚಿದಂಬರಂ ಕಿಡಿಕಾರಿದ್ದಾರೆ.

ನವದೆಹಲಿ: ‘ಕೇಂದ್ರ ಸರ್ಕಾರ ಇತ್ತೀಚೆಗೆ ದೇಶವ್ಯಾಪಿ ಜಾರಿಗೆ ತಂದ ನೂತನ ಕ್ರಿಮಿನಲ್‌ ಕಾಯ್ದೆಗಳನ್ನು ರಚಿಸಿದ್ದು ಪಾರ್ಟ್‌ ಟೈಮರ್‌ಗಳು (ಅರೆಕಾಲಿಕರ)’ ಎಂದು ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯಸಭಾ ಸಂಸದ ಪಿ.ಚಿದಂಬರಂ ಕಿಡಿಕಾರಿದ್ದಾರೆ.

ಸಂದರ್ಶನವೊಂದರಲ್ಲಿ ನೂತನ ಕಾಯ್ದೆ ಬಗ್ಗೆ, ಅದರಲ್ಲಿನ ಅಡಕಗಳ ಬಗ್ಗೆ ಕಿಡಿಕಾರಿರುವ ಚಿದಂಬರಂ, ಇದನ್ನು ರೂಪಿಸಿದ್ದು ಪಾರ್ಟ್‌ ಟೈಮರ್‌ಗಳು ಎಂದು ಟೀಕಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ‘ಸಂಸತ್ತಿನಲ್ಲಿ ಇರುವ ನಾವೆಲ್ಲರೂ ಪಾರ್ಟ್‌ ಟೈಮರ್‌ಗಳೇ? ಇದು ಸಂಸತ್ತಿನ ಜ್ಞಾನ ಸಂಪತ್ತಿಗೆ ಮಾಡಿದ ಕ್ಷಮಿಸಲಾಗದ ಅಪಮಾನ’ ಎಂದು ತಿರುಗೇಟು ನೀಡಿದ್ದಾರೆ.

‘ಇಂದು ಬೆಳಗ್ಗೆ ಪತ್ರಿಕೆ ಓದಿದಾಗ ಈ ಹಿಂದೆ ದೇಶದ ಹಣಕಾಸು ಸಚಿವರಾಗಿದ್ದ, ಸುದೀರ್ಘ ಅವಧಿಗೆ ಸಂಸತ್‌ ಸದಸ್ಯರಾಗಿದ್ದ ಮತ್ತು ಹಾಲಿ ಸಂಸದರೂ ಆಗಿರುವ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆ ನನಗೆ ಆಘಾತ ಮೂಡಿಸಿದೆ. 

ಈ ಸಂಸತ್‌ ಅತ್ಯದ್ಭುತ ಕೆಲಸಗಳನ್ನು ಮಾಡಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಹೊಸ ಕಾಯ್ದೆಯು ನಮಗೆ ವಸಾಹತುಶಾಹಿ ಕಾಲದ ಕಾಯ್ದೆಯಿಂದ ಮುಕ್ತಿ ನೀಡುವ ಜೊತೆಗೆ ನವಯುಗದ ದೃಷ್ಟಿಕೋನ ಒಳಗೊಂಡ ಕಾನೂನನ್ನು ನೀಡಿದೆ. ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಈ ಕಾಯ್ದೆ ರೂಪಿಸುವಲ್ಲಿ ಕೈಜೋಡಿಸುವ ಎಲ್ಲಾ ಅವಕಾಶಗಳಿತ್ತು. ಆದರೆ ಈ ಗೌರವಾನಿತ್ವ ಸಂಭಾವಿತ ವ್ಯಕ್ತಿ ಹೊಸ ಕಾನೂನುಗಳನ್ನು ಪಾರ್ಟ್‌ ಟೈಮರ್‌ಗಳು ರಚಿಸಿದ್ದಾರೆ ಎಂದಿದ್ದಾರೆ. ಇದು ಕ್ಷಮೊಸಲಾಗದ ಅಪಮಾನ’ ಎಂದು ಧನಕರ್ ಕಿಡಿಕಾರಿದ್ದಾರೆ.