ದೇಹದೊಳಗೆ ಅಡಗಿಸಿಟ್ಟು ದುಬೈನಿಂದ 28 ಕೆಜಿ ಚಿನ್ನದ ಪೇಸ್ಟ್‌ ತಂದಿದ್ದ ದಂಪತಿ ಸೆರೆ

| N/A | Published : Jul 23 2025, 04:41 AM IST / Updated: Jul 23 2025, 06:28 AM IST

gold coins
ದೇಹದೊಳಗೆ ಅಡಗಿಸಿಟ್ಟು ದುಬೈನಿಂದ 28 ಕೆಜಿ ಚಿನ್ನದ ಪೇಸ್ಟ್‌ ತಂದಿದ್ದ ದಂಪತಿ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ದುಬೈನಿಂದ ಭಾರತಕ್ಕೆ ಅಕ್ರಮವಾಗಿ 20 ಕೋಟಿ ರು.ಮೌಲ್ಯದ 20 ಕೆಜಿ ಚಿನ್ನ ಸಾಗಿಸುತ್ತಿದ್ದ ದಂಪತಿಯನ್ನು ಸೂರತ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.

 ಸೂರತ್: ದುಬೈನಿಂದ ಭಾರತಕ್ಕೆ ಅಕ್ರಮವಾಗಿ 20 ಕೋಟಿ ರು.ಮೌಲ್ಯದ 20 ಕೆಜಿ ಚಿನ್ನ ಸಾಗಿಸುತ್ತಿದ್ದ ದಂಪತಿಯನ್ನು ಸೂರತ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.

ಜು.20ರಂದು ದುಬೈನಿಂದ ಸೂರತ್‌ಗೆ ದಂಪತಿ ಬಂದಿಳಿದಿದ್ದರು. ಗಂಡ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ಹೆಂಡತಿ ಚೂಡಿದಾರ್ ಧರಿಸಿದ್ದಳು. ದಂಪತಿ ವಿಚಿತ್ರವಾಗಿ ನಡೆಯುತ್ತಿದ್ದರು. ಅವರ ಹೊಟ್ಟೆಯ ಭಾಗ ಸ್ವಲ್ಪ ಉಬ್ಬಿದಂತೆ ಕಾಣುತ್ತಿತ್ತು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಪತಿಯ ಮೈಮೇಲೆ 12 ಕೆಜಿ ಹಾಗೂ ಹೆಂಡತಿಯ ಮೈಮೇಲೆ 16 ಕೆಜಿ ಚಿನ್ನದ ಪೇಸ್ಟ್ ದೊರಕಿದೆ. ಇವುಗಳಿಂದ ಸುಮಾರು 20 ಕೋಟಿ ರು. ಮೌಲ್ಯದ 20 ಕೆಜಿಗೂ ಅಧಿಕ ಶುದ್ಧ ಚಿನ್ನ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more Articles on