ಹರ್ಯಾಣದಿಂದ ಯಮುನೆಗೆ ವಿಷ:ಕೇಜ್ರಿವಾಲ್‌ಗೆ ಆಯೋಗ ನೋಟಿಸ್‌

| Published : Jan 29 2025, 01:31 AM IST

ಹರ್ಯಾಣದಿಂದ ಯಮುನೆಗೆ ವಿಷ:ಕೇಜ್ರಿವಾಲ್‌ಗೆ ಆಯೋಗ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಹರ್ಯಾಣ ಯಮುನಾ ನದಿಗೆ ವಿಷ ಬೆರಸುತ್ತಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿಕೆ ಸಂಬಂಧ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದ್ದು, ಬುಧವಾರ ರಾತ್ರಿ 8 ಗಂಟೆಯೊಳಗೆ ಉತ್ತರ ನಿಡುವಂತೆ ಸೂಚಿಸಿದೆ. ಜೊತೆಗೆ ಹೇಳಿಕೆಗೆ ದಾಖಲೆ ಸಮೇತ ಉತ್ತರಿಸಬೇಕು ಎಂದು ಸೂಚಿಸಿದೆ.

ನವದೆಹಲಿ: ಹರ್ಯಾಣ ಯಮುನಾ ನದಿಗೆ ವಿಷ ಬೆರಸುತ್ತಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿಕೆ ಸಂಬಂಧ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದ್ದು, ಬುಧವಾರ ರಾತ್ರಿ 8 ಗಂಟೆಯೊಳಗೆ ಉತ್ತರ ನಿಡುವಂತೆ ಸೂಚಿಸಿದೆ. ಜೊತೆಗೆ ಹೇಳಿಕೆಗೆ ದಾಖಲೆ ಸಮೇತ ಉತ್ತರಿಸಬೇಕು ಎಂದು ಸೂಚಿಸಿದೆ.

ಕೇಜ್ರಿವಾಲ್‌ ಹೇಳಿದ್ದೇನು?:

ಮಂಗಳವಾರ ಚುನಾವಣಾ ಪ್ರಚಾರದ ವೇಳೆ ‘ಹರ್ಯಾಣದ ಬಿಜೆಪಿ ಸರ್ಕಾರ ದೆಹಲಿಗರನ್ನು ಕೊಲ್ಲಲೆಂದೇ ಯಮುನಾ ನದಿಯಲ್ಲಿ ವಿಷ ಬೆರಸುತ್ತಿದೆ. ಈ ವಿಷವನ್ನು ನೀರು ಶುದ್ಧೀಕರಣ ಘಟಕಗಳೂ ಸಹ ಸಂಸ್ಕರಿಸಲು ಆಗುವುದಿಲ್ಲ. ಈ ಮೂಲಕ ದೆಹಲಿಗೆ ಕುಡಿಯುವ ನೀರಿಗೆ ಕಂಟಕವೊಡ್ಡಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸುತ್ತಿದೆ. ಆದರೆ ಆಪ್‌ ಇದಕ್ಕೆ ಆಸ್ಪದ ನೀಡುದಿಲ್ಲ’ ಎಂದಿದ್ದರು. ಇದರ ಬೆನ್ನಲ್ಲೇ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತು. ಮತ್ತೊಂದೆಡೆ ಹರ್ಯಾಣ ಸರ್ಕಾರ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದೆ.