ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ

| Published : Apr 16 2024, 01:02 AM IST / Updated: Apr 16 2024, 06:34 AM IST

ಸಾರಾಂಶ

ಇಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇರುವ ಹೆಲಿಕಾಪ್ಟರ್‌ವೊಂದನ್ನು ಚುನಾವಣಾ ಅಧಿಕಾರಿಗಳು ಸೋಮವಾರ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದರು.

ನೀಲಗಿರಿ (ತಮಿಳುನಾಡು): ಇಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇರುವ ಹೆಲಿಕಾಪ್ಟರ್‌ವೊಂದನ್ನು ಚುನಾವಣಾ ಅಧಿಕಾರಿಗಳು ಸೋಮವಾರ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದರು.

 ಇಲ್ಲಿ ನಿಲುಗಡೆಯಾದ ಹೆಲಿಕಾಪ್ಟರ್‌ ಅನ್ನು ಚುನಾವಣಾ ಕ್ಷಿಪ್ರಪಡೆಯ ಅಧಿಕಾರಿಗಳು ತಪಾಸಣೆ ನಡೆಸಿದರು. ರಾಹುಲ್‌ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರ ಕೇರಳದ ವಯನಾಡ್‌ಗೆ ತೆರಳುತ್ತಿದ್ದರು. ಚುನಾವಣಾ ಪ್ರಚಾರ, ಸಾರ್ವಜನಿಕ ಸಭೆ ಸೇರಿ ಇತರ ಚುನಾವಣಾ ಕಾರ್ಯಗಳ ಸಂಬಂಧ ರಾಹುಲ್‌ ಇಲ್ಲಿಗೆ ಆಗಮಿಸಿದ್ದರು. ರಾಹುಲ್‌ ಸ್ಪರ್ಧಿಸುತ್ತಿರುವ ವಯನಾಡ್‌ನಲ್ಲಿ ಏ.26 ರಂದು ಚುನಾವಣೆ ನಡೆಯಲಿದೆ.