ಇಲ್ಲದ ದೇಶಗಳ ಹೆಸರಲ್ಲಿ 3 ರಾಯಭಾರ ಕಚೇರಿ!

| N/A | Published : Jul 24 2025, 12:46 AM IST / Updated: Jul 24 2025, 04:40 AM IST

ಸಾರಾಂಶ

ಭೂಮಿಯ ಮೇಲೆ ಇಲ್ಲದ ದೇಶಗಳ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿ ತೆರೆದು ಅದಕ್ಕೆ ರಾಯಭಾರಿಯಾಗಿದ್ದ ಹರ್ಷವರ್ಧನ್‌ ಜೈನ್‌ ಎಂಬಾತನನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆತನಿಂದ ನಕಲಿ ಪಾಸ್ಪೋರ್ಟ್‌, ಕಾರಿನ ನಕಲಿ ಡಿಪ್ಲೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ವಶಪಡಿಸಿಕೊಂಡಿದ್ದಾರೆ.

 ನವದೆಹಲಿ: ಭೂಮಿಯ ಮೇಲೆ ಇಲ್ಲದ ದೇಶಗಳ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿ ತೆರೆದು ಅದಕ್ಕೆ ರಾಯಭಾರಿಯಾಗಿದ್ದ ಹರ್ಷವರ್ಧನ್‌ ಜೈನ್‌ ಎಂಬಾತನನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆತನಿಂದ ನಕಲಿ ಪಾಸ್ಪೋರ್ಟ್‌, ಕಾರಿನ ನಕಲಿ ಡಿಪ್ಲೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ವಶಪಡಿಸಿಕೊಂಡಿದ್ದಾರೆ.

ಜೈನ್‌, ವೆಸ್ಟ್‌ ಆರ್ಕ್‌ಟಿಕಾ, ಸೆಬೋರ್ಗಾ ಮತ್ತು ಲಂಡೋನಿಯಾ ಎಂಬ ಅಸ್ತಿತ್ವದಲ್ಲೇ 3 ದೇಶಗಳ ಹೆಸರಲ್ಲಿ ಗಾಜಿಯಾಬಾದ್‌ನಲ್ಲಿ ಕಚೇರಿ ತೆರೆದಿದ್ದ. ಅದಕ್ಕೆಂದೇ ನಕಲಿ ಪಾಸ್ಪೋರ್ಟ್‌, ವಿದೇಶಾಂಗ ಇಲಾಖೆಯ ಸೀಲ್‌, ಸ್ಟ್ಯಾಂಪ್‌ ಸೃಷ್ಟಿಸಿದ್ದ. 

ಐಷಾರಾಮಿ ಕಟ್ಟಡ, ಕಾರು, ದುಬಾರಿ ವಾಚ್‌ ಬಳಕೆ ಮೂಲಕ ಜನರಲ್ಲಿ ತಾನು ನಿಜವಾದ ರಾಯಭಾರಿ ಎಂಬ ಭಾವನೆ ಬರುವಂತೆ ಮಾಡಿದ್ದ. ಜೊತೆಗೆ ಜನರಿಗೆ ನಂಬಿಕೆ ಹುಟ್ಟಿಸಲು ರಾಷ್ಟ್ರಪತಿ ಪ್ರಧಾನಿ ಜತೆಗೆ ಎಡಿಟ್‌ ಮಾಡಿರುವ ಫೋಟೋ ಹಾಕಿಕೊಂಡಿದ್ದ. ಈ ಕಚೇರಿ ಬಳಸಿಕೊಂಡು ಜನರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಮೋಸ ಮಾಡುತ್ತಿದ್ದ. ಈ ಕುರಿತು ಸಲ್ಲಿಕೆಯಾದ ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗ ಆತನ ವಂಚನೆ ಬೆಳಕಿಗೆ ಬಂದಿದೆ.

Read more Articles on