ಇವಿಎಂ ಸಾಗಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿ ಎಡವಟ್‌

| Published : Apr 20 2024, 01:30 AM IST / Updated: Apr 20 2024, 07:12 AM IST

ಸಾರಾಂಶ

ಇವಿಎಂ ಸಾಗಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದ ಕಾರಣ ಮತದಾನಕ್ಕೆ ಅಡಚಣೆಯುಂಟಾಗಿದೆ.

ಲಖೀಂಪುರ: ಇವಿಎಂ ಸಾಧನಗಳಿದ್ದ ವಾಹನವನ್ನು ಸಾಗಿಸುತ್ತಿದ್ದ ದೋಣಿಯೊಂದು ಭಾಗಶಃ ನದಿಯಲ್ಲಿ ಮುಳುಗಿದ ಘಟನೆ ಶುಕ್ರವಾರ ಅಸ್ಸಾಂನಲ್ಲಿ ನಡೆದಿದೆ.

ಲಖೀಂಪುರ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ಮತದಾನದ ಸಂದರ್ಭದಲ್ಲಿ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಅವುಗಳನ್ನು ಬದಲಿಸಲು ಅಮರ್‌ಪುರ್‌ ಪ್ರದೇಶದ ಸಾದಿಯಾಗೆ ತೆರಳುತ್ತಿದ್ದಾಗ ದೇವಾನಿ ನದಿಯ ನೀರಿನ ಮಟ್ಟ ದಿಢೀರ್‌ ಹೆಚ್ಚಾದ್ದರಿಂದ ಇವಿಎಂಗಳನ್ನು ಸಾಗಿಸುತ್ತಿದ್ದ ದೋಣಿಯು ನದಿಯಲ್ಲಿ ಮುಳುಗಿದೆ.

ವಾಹನ ಚಾಲಕ ಮತ್ತು ಅಧಿಕಾರಿಗಳು ಹೊರ ಬಂದಿದ್ದಾರೆ. ಆದರೆ ವಾಹನದಲ್ಲಿದ್ದ ಇವಿಎಂ ಸಾಧನಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ ಅಧಿಕಾರಿಗಳು ತಿಳಿಸಿದ್ದಾರೆ.