ಸಾರಾಂಶ
ಚೆನ್ನೈ: ಬೆಂಗಳೂರು ಗಡಿಭಾಗದ ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಐಫೋನ್ ಬಿಡಿಭಾಗ ಸಂಯೋಜನಾ ಘಟಕದ ರಾಸಾಯನಿಕ ಗೋಡೌನ್‌ನಲ್ಲಿ ಶನಿವಾರ ಮುಂಜಾನೆ ಬೆಂಕಿ ಅನಾಹುತ ಸಂಭವಿಸಿದೆ.
ತಕ್ಷಣ ಹೊಸೂರು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಆದರೂ ಘಟಕದ ಹಲವು ಭಾಗ ಹಾಗೂ ಹಲವು ಯಂತ್ರಗಳು ಸುಟ್ಟು ಹೋಗಿವೆ.
‘ಶನಿವಾರ ಬೆಳಗ್ಗೆ 6 ಗಂಟೆಗೆ ಐಫೋನ್ ಬಿಡಿಭಾಗ ಸಂಯೋಜಿಸುವ ಟಾಟಾ ಕಂಪನಿಯ ಎಲೆಕ್ಟ್ರಾನಿಕ್ಸ್ ಘಟಕದ ರಾಸಾಯನಿಕ ಗೋಡೌನ್‌ನಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಲಾಗಿದ್ದು, ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂಬುದು ತಿಳಿದುಬಂದಿಲ್ಲ’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕಂಪನಿ ತಿಳಿಸಿದೆ.
2021ರಲ್ಲಿ ಸ್ಥಾಪಿತವಾದ ಈ ಘಟಕದಲ್ಲಿ ಐಫೋನ್ ಬಿಡಿಭಾಗಗಳನ್ನು ಜೋಡಿಸಲಾಗುತ್ತದೆ. ಜತೆಗೆ ಚೀನಾಗೂ ರಫ್ತು ಮಾಡಲಾಗುತ್ತಿದೆ.
----
2024ರ ನವೆಂಬರ್‌ನಲ್ಲಿ 6000 ಕೋಟಿ ರು. ವೆಚ್ಚದಲ್ಲಿ ಐಪೋನ್ ಉತ್ಪಾದನೆಯ ಘಟಕವನ್ನು ವಿಸ್ತರಿಸಲು ನಿರ್ಧರಿಸಿದೆ. ಇದಕ್ಕಾಗಿ 50 ಸಾವಿರ ಕೆಲಸಗಾರರನ್ನು ನೇಮಿಕೊಂಡಿದೆ. ಇದರಲ್ಲಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.