ತೋಟಕ್ಕೆ ಹಬ್ಬಿದ ಘನತ್ಯಾಜ್ಯ ಬೆಂಕಿ, ಅಪಾರ ಹಾನಿ
Apr 02 2025, 01:01 AM ISTಪಟ್ಟಣದ ಕೊಟ್ಟೂರು ರಸ್ತೆಯ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೊತ್ತಿದ ಬೆಂಕಿಯು ಚಂದೋಡಿ ಲೀಲಾ ನಾಟಕ ಕಂಪನಿ ಮಾಲೀಕ ಶಂಭುಲಿಂಗಪ್ಪ ಅವರ ಅಳಿಯ ಜೆ.ಎಸ್. ಪ್ರಶಾಂತ್ ಕುಮಾರ್ ಅವರಿಗೆ ಸೇರಿದ ಜಮೀನಿಗೆ ತಗುಲಿ, ಸುಮಾರು ೩೦೦ ಅಡಕೆ, ೩೦೦ ಬಾಳೆ ಗಿಡಗಳು, ಲ್ಯಾಟರಲ್ ಪೈಪ್ಗಳು, ಸ್ಪ್ಲಿಂಕ್ಲರ್ ಪೈಪ್ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.