ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ 3 ಪ್ರಕರಣಗಳನ್ನು ಮುಂದಿಟ್ಟು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ತಿರುಗೇಟು ನೀಡಿದ್ದಾರೆ.
----
- ಬರೀ 2 ಮತ ಬಂದಿದ್ದರೂ ನೆಹರುಗೆ ಪ್ರಧಾನಿ ಪಟ್ಟ- 1975ರಲ್ಲಿ ಇಂದಿರಾ ಗಾಂಧಿ ಆಯ್ಕೆ ರದ್ದಾಗಿತ್ತು
- ಪೌರತ್ವ ಪಡೆವ ಮೊದಲೇ ಸೋನಿಯಾ ಮತದಾನ==-
- ಕಾಂಗ್ರೆಸ್ ನಾಯಕರ 3 ಪ್ರಕರಣ ಉಲ್ಲೇಖಿಸಿ ಚಾಟಿ- ಮತಚೋರಿ ಆರೋಪ ಮಾಡಿದ್ದ ರಾಹುಲ್‌ಗೆ ಟಾಂಗ್
--ಸದನದಲ್ಲಿ ರಾಹುಲ್-ಅಮಿತ್ ಶಾ ಜಟಾಪಟಿ
- ವಿವರ ಪುಟ 9--
ಪಿಟಿಐ ನವದೆಹಲಿಲೋಕಸಭೆ ಅಧಿವೇಶನದಲ್ಲೂ ಮತಚೋರಿ ಕುರಿತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ 3 ಪ್ರಕರಣಗಳನ್ನು ಮುಂದಿಟ್ಟು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ತಿರುಗೇಟು ನೀಡಿದ್ದಾರೆ.ಮತಪಟ್ಟಿ ಪರಿಷ್ಕರಣೆ ಕುರಿತು ಮಂಗಳವಾರದಿಂದ ಆರಂಭವಾಗಿದ್ದ ಚರ್ಚೆಯ ಭಾಗವಾಗಿ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಶಾ, ಮತಚೋರಿ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುವ ಯತ್ನ ಮಾಡಿದರು.
‘ಕಾಂಗ್ರೆಸ್ ನಾಯಕರಿಂದ ಮತಚೋರಿ ನಡೆದ 3 ಘಟನೆಗಳನ್ನು ಉಲ್ಲೇಖಿಸುತ್ತೇನೆ. ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭಭಾಯಿ ಪಟೇಲರು ಪ್ರಧಾನಿಯಾಗಬೇಕೆಂದು 28 ಮಂದಿ ಮತ ಚಲಾಯಿಸಿದರೆ, ನೆಹರು ಅವರಿಗೆ ಕೇವಲ ಇಬ್ಬರು ಮತ ಹಾಕಿದರು. ಆದರೂ ಕೊನೆಗೆ ನೆಹರೂ ಅವರೇ ಪ್ರಧಾನಿಯಾದರು. ಇದು ಮೊದಲ ಮತಚೋರಿ. 1975ರಲ್ಲಿ ಇಂದಿರಾ ಗಾಂಧಿಯವರು ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ್ದನ್ನು ಅಲಹಾಬಾದ್ ಹೈಕೋರ್ಟ್ ಅಮಾನ್ಯಗೊಳಿಸಿತು. ಆದರೆ ಇಂದಿರಾ, ಪ್ರಧಾನಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಂತೆ ಸಂಸತ್ತಲ್ಲಿ ಮಸೂದೆ ಮಂಡಿಸಿದರು. ಇದು 2ನೇ ಮತಚೋರಿ. ಭಾರತದ ಪೌರತ್ವ ಪಡೆವ ಮೊದಲೇ ಸೋನಿಯಾ ಗಾಂಧಿ ಇಲ್ಲಿ ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇದು 3ನೇ ಮತಚೋರಿ’ ಎಂದು ಅಮಿತ್ ಶಾ ಚಾಟಿ ಬೀಸಿದರು.ಜೊತೆಗೆ, ‘ನೆಹರು, ಇಂದಿರಾ, ಲಾಲಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಅವಧಿಯಲ್ಲೂ ಮತಪಟ್ಟಿ ಪರಿಷ್ಕರಣೆ ನಡೆದಿದೆ. ಅದನ್ನು ಯಾವುದೇ ಪಕ್ಷ ವಿರೋಧಿಸಿರಲಿಲ್ಲ. ಏಕೆಂದರೆ ಇದು ಚುನಾವಣೆಗಳನ್ನು ಸ್ವಚ್ಛವಾಗಿಡುವ ಮತ್ತು ಪ್ರಜಾಪ್ರಭುತ್ವವನ್ನು ಆರೋಗ್ಯಕರವಾಗಿಡುವ ಪ್ರಕ್ರಿಯೆ’ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.