ಸಾರಾಂಶ
ಆಂಧ್ರಪ್ರದೇಶದ ಅನ್ನವರಂನ ದುಡ್ಡು ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯ ಗಣೇಶ ಶರ್ಮ ದ್ರಾವಿಡರು ಬುಧವಾರ, ಅಕ್ಷಯ ತೃತಿಯ ದಿನದಂದು ಶ್ರೀ ಕಾಂಚಿ ಕಾಮಕೋಟಿ ಪೀಠದ ಉತ್ತರಾಧಿಕಾರಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ವಿಜಯೇಂದ್ರ ಸರಸ್ವತಿಗಳಿಂದ ಸನ್ಯಾಸ ದೀಕ್ಷೆಕಾಂಚೀಪುರಂ: ಆಂಧ್ರಪ್ರದೇಶದ ಅನ್ನವರಂನ ದುಡ್ಡು ಸತ್ಯ ವೆಂಕಟ ಸೂರ್ಯ ಸುಬ್ರಹ್ಮಣ್ಯ ಗಣೇಶ ಶರ್ಮ ದ್ರಾವಿಡರು ಬುಧವಾರ, ಅಕ್ಷಯ ತೃತಿಯ ದಿನದಂದು ಶ್ರೀ ಕಾಂಚಿ ಕಾಮಕೋಟಿ ಪೀಠದ ಉತ್ತರಾಧಿಕಾರಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿಗಳು ಕಾಂಚೀಪುರದಲ್ಲಿ ಸನ್ಯಾಸ ದೀಕ್ಷೆ ನೀಡಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಗಣೇಶ ಶರ್ಮ ದ್ರಾವಿಡರು ಋಗ್ವೇದದಲ್ಲಿ ಘನಪಾಠಿಗಳಾಗಿದ್ದು, ಯಜುರ್ವೇದ ಸಾಮವೇದ ಷಡಂಗಗಳು ಮತ್ತು ದಶ ಉಪನಿಷತ್ತುಗಳಲ್ಲಿ ವಿದ್ವಾಂಸರಾಗಿದ್ದಾರೆ.