ಸಾರಾಂಶ
ಲಕ್ಷದ ಗಡಿ ದಾಟಿ, ಬಳಿಕ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಲಕ್ಷದ ಗಡಿ ದಾಟಿ ದಾಖಲೆ ಬರೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1,00,750 ರು.ಗೆ ತಲುಪಿದೆ.
ನವದೆಹಲಿ: ಲಕ್ಷದ ಗಡಿ ದಾಟಿ, ಬಳಿಕ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಲಕ್ಷದ ಗಡಿ ದಾಟಿ ದಾಖಲೆ ಬರೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1,00,750 ರು.ಗೆ ತಲುಪಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ದರ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಅಖಿಲ ಭಾರತೀಯ ಸರಾಫ್ ಅಸೋಸಿಯೇಷನ್ ಪ್ರಕಾರ 99.5 ಶುದ್ಧತೆಯ ಚಿನ್ನ ಬುಧವಾರ ಒಂದು ಸಾವಿರ ರು. ಏರಿಕೆ ಕಂಡು 1,00,750 ರು.ಗೆ ತಲುಪಿದೆ. ಮಂಗಳವಾರ ಈ ದರ 99, 750 ರು. ಇತ್ತು. ಇನ್ನು 99.5 ಶುದ್ಧತೆ ಚಿನ್ನ 1050 ರು. ಏರಿಕೆ ಕಂಡು 1,00,350 ರು.ಗೆ ತಲುಪಿದೆ. ಹಿಂದಿನ ದಿನ 99,300 ರು.ನಷ್ಟಿತ್ತು.
ಏ.22ರಂದು ಚಿನ್ನದ ದರ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ 1,01,600 ರು.ಗೆ ತಲುಪಿ ದಾಖಲೆ ಬರೆದಿತ್ತು. ಇದರ ಜೊತೆಗೆ ಬೆಳ್ಳಿ ದರವೂ ಬುಧವಾರ ಹೆಚ್ಚಳವಾಗಿದ್ದು ಪ್ರತಿ ಕೇಜಿಗೆ 440 ರು. ಏರಿಕೆಯಾಗಿ 98,940 ರು.ಗೆ ತಲುಪಿದೆ.