ಸಾರಾಂಶ
ಮಧ್ಯಪ್ರಾಚ್ಯದ ಸಂರ್ಘಷದ ನಡುವೆ ಭಾರತದಲ್ಲಿ ಮಂಗಳವಾರ ಚಿನ್ನ, ಬೆಳ್ಳಿಯ ದರ ಸಾರ್ವಕಾಲಿಕ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನ ಪ್ರತಿ 10 ಗ್ರಾಂಗೆ 75820 ರು.ಗೆ ತಲುಪಿದೆ.
ನವದೆಹಲಿ: ಮಧ್ಯಪ್ರಾಚ್ಯದ ಸಂರ್ಘಷದ ನಡುವೆ ಭಾರತದಲ್ಲಿ ಮಂಗಳವಾರ ಚಿನ್ನ, ಬೆಳ್ಳಿಯ ದರ ಸಾರ್ವಕಾಲಿಕ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನ ಪ್ರತಿ 10 ಗ್ರಾಂಗೆ 75820 ರು.ಗೆ ತಲುಪಿದೆ. ಇದು ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಸಾರ್ವಕಾಲಿಕ ಗರಿಷ್ಠ ದರವಾಗಿದೆ. ಇನ್ನು ಪ್ರತಿ ಕೆಜಿ ಚಿನ್ನದ ಬೆಲೆ ಕೂಡಾ ಸಾರ್ವಜನಿಕ ಗರಿಷ್ಠವಾದ 86200 ರು.ಗೆ ತಲುಪಿದೆ.ಇನ್ನು ರಾಜಧಾನಿ ನವದೆಹಲಿಯಲ್ಲಿ ಚಿನ್ನದ ಬೆಲೆ 700 ರು. ಏರಿಕೆ ಕಂಡಿದ್ದು 10 ಗ್ರಾಂ ಚಿನ್ನದ 73,750 ರು. ಆಗಿದೆ. ಆದೇ ರೀತಿ ಬೆಳ್ಳಿ ದರವೂ 800 ರು.ನಷ್ಟು ಏರಿಕೆ ಕಂಡಿದ್ದು, ಕೆಜಿ ಬೆಳ್ಳಿ 86,500 ರು.ಗೆ ತಲುಪಿದೆ.
ಮುಂಬೈನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 73008 ರು. ತಲುಪಿದ್ದರೆ, ಶೇ.99.9 ಶುದ್ಧತೆಯ ಚಿನ್ನದ ದರ 73302 ರು.ಗೆ ಏರಿದೆ. ಅದೇ ರೀತಿ ಬೆಳ್ಳಿ ಬೆಲೆ 83213 ರು. ಮುಟ್ಟಿದೆ.