21 ವರ್ಷ ಸೇವೆ ಸಲ್ಲಿಸಿದ್ದ ಮಾಜಿ ಉದ್ಯೋಗಿಗೆ ಗೂಗಲ್‌ನಿಂದ 22000 ಕೋಟಿ ರೂ.!- ಇಲ್ಲಿದೆ ಕಾರಣ

| Published : Oct 01 2024, 01:30 AM IST / Updated: Oct 01 2024, 04:57 AM IST

ಸಾರಾಂಶ

ತನ್ನಲ್ಲಿ 21 ವರ್ಷ ಸೇವೆ ಸಲ್ಲಿಸಿ ತೊರೆದಿದ್ದ ಉದ್ಯೋಗಿಯನ್ನು ಮರಳಿ ನೇಮಿಸಿಕೊಳ್ಳಲು ಗೂಗಲ್‌ ಬರೋಬ್ಬರಿ 22000 ಕೋಟಿ ರು. ಖರ್ಚು ಮಾಡಿದೆ. ಚ್ಯಾಟ್‌ಬಾಟ್‌ ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದ ನೋಮ್ ಶಜೀರ್, ಕ್ಯಾರೆಕ್ಟರ್‌.ಎಐ ಸ್ಥಾಪಿಸಿದ್ದರು.

ಕ್ಯಾಲಿಫೋರ್ನಿಯಾ: ತನ್ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಕಂಪನಿ ತೊರೆದಿದ್ದ ಅತ್ಯಂತ ಚತುರ ಉದ್ಯೋಗಿ ಮರುನೇಮಕ ಮಾಡಿಕೊಳ್ಳಲು ಗೂಗಲ್‌ ಬರೋಬ್ಬರಿ 22000 ಕೋಟಿ ರು. ಖರ್ಚು ಮಾಡಿದೆ!

ನಿಜ. ಗೂಗಲ್‌ನಲ್ಲಿ 21 ವರ್ಷ ಕೆಲಸ ಮಾಡಿದ್ದ ನೋಮ್ ಶಜೀರ್, ತನ್ನ ಸಹೋದ್ಯೋಗಿಯೊಂದಿಗೆ ಸೇರಿ ಅಭಿವೃದ್ಧಿಪಡಿಸಿದ್ದ ಚ್ಯಾಟ್‌ಬಾಟ್‌ ಅನ್ನು ಬಿಡುಗಡೆಗೊಳಿಸಲು ನಿರಾಕರಿಸಿದ ಕಾರಣ 2021ರಲ್ಲಿ ಕಂಪನಿಯನ್ನು ತೊರೆದಿದ್ದರು. ನಂತರ ಕ್ಯಾರೆಕ್ಟರ್‌.ಎಐ ಎಂಬ ಸ್ಟಾರ್ಟಪ್‌ ಸ್ಥಾಪಿಸಿದ್ದರು. ಅದೀಗ ವಿಶ್ವದ ಅತ್ಯಂತ ಪ್ರಭಾವಿ ಎಐ ಸ್ಟಾರ್ಟಪ್‌ಗಳ ಪೈಕಿ ಒಂದಾಗಿದೆ.

ಇದೀಗ ಎಐ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮತ್ತೆ ನೋಮ್‌ನ ಅವಶ್ಯಕತೆ ಮನಗಂಡ ಆತನನ್ನು ಮರಳಿ ನೇಮಿಸಿಕೊಳ್ಳುವ ಸಲುವಾಗಿ ಆತನ ಕಂಪನಿಯನ್ನೇ 22000 ಕೋಟಿ ರು. ಕೊಟ್ಟು ಖರೀದಿಸಿದೆ. ಈ ಒಪ್ಪಂದದ ಅನ್ವಯ ಕ್ಯಾರೆಕ್ಟರ್‌.ಎಐನ ತಂತ್ರಜ್ಞಾನ ಗೂಗಲ್‌ ಪಾಲಾಗಲಿದೆ ಮತ್ತು ನೋಮ್‌ ಕೂಡಾ ಗೂಗಲ್‌ನಲ್ಲೇ ಕೆಲಸ ಮಾಡಲಿದ್ದಾರೆ.