ಸಾರಾಂಶ
ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ನಟಿ ನರ್ಗಿಸ್ ದತ್ ಇಬ್ಬರ ಹೆಸರನ್ನೂ ಕೇಂದ್ರ ಮಾಹಿತಿ ಪ್ರಸಾರ ಸಚಿವಾಲಯವು ಕೈಬಿಟ್ಟಿದೆ.
ಅತ್ಯತ್ತಮ ಚೊಚ್ಚಲ ನಿರ್ದೇಶನಕ್ಕೆ ನೀಡಲಾಗುವ ಹಾಲಿ ಪ್ರಶಸ್ತಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿದೆ. ಅದನ್ನು ಬದಲಾಯಿಸಿ ಇನ್ನು ಕೇವಲ ‘ಅತ್ಯತ್ತಮ ಚೊಚ್ಚಲ ಚಿತ್ರ ನಿದೇರ್ಶಕ’ ಎಂದು ಘೋಷಿಸಲಾಗುತ್ತದೆ.
ಅದೇ ರೀತಿ ಅಂತೆಯೇ ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಉತ್ತಮ ಚಿತ್ರಕ್ಕೆ ‘ನರ್ಗೀಸ್ ದತ್ ಪ್ರಶಸ್ತಿ’ ನೀಡಲಾಗುತ್ತದೆ. ಇನ್ನು ಅವರ ಹೆಸರನ್ನೂ ಪ್ರಶ್ತಿಯಿಂದ ತೆಗೆದು ಹಾಕಲಾಗಲಾಗಿದೆ.
ಸಚಿವಾಲಯವು ಸ್ಥಾಪಿಸಿದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಇತರ ಬದಲಾವಣೆಗಳನ್ನು ಘೋಷಿಸಿದೆ.
ಈ ಪ್ರಕಾರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಬಹುಮಾನದ ಮೊತ್ತವನ್ನು 10 ಲಕ್ಷ ರು.ದಿಂದ 15 ಲಕ್ಷ ರು.ಗೆ ಹೆಚ್ಚಿಸಲಾಗಿದೆ.
ಸ್ವರ್ಣ್ ಕಮಲ್ ಮತ್ತು ರಜತ್ ಕಮಲ್ ಪ್ರಶಸ್ತಿಗಳಿಗೆ ಕ್ರಮವಾಗಿ ಸದ್ಯ ನೀಡಲಾಗುತ್ತಿರುವ 2 ಲಕ್ಷ ರು., 50,000 ರು. ಬಹುಮಾನವನ್ನು ಕ್ರಮವಾಗಿ 3 ಲಕ್ಷ ಮತ್ತು 2 ಲಕ್ಷ ರು.ಗೆ ಏರಿಸಲಾಗಿದೆ.