ಸಾರಾಂಶ
ನವದೆಹಲಿ: ಸಾರಥಿ ಪೋರ್ಟಲ್‌ನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆ ತಲೆದೋರಿರುವ ಕಾರಣ ವಾಹನ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಮಾನ್ಯತೆಯನ್ನು 2024ರ ಫೆ.29ರವರೆಗೆ ವಿಸ್ತರಿಸಿ ಕೇಂದ್ರ ರಸ್ತೆ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಜ.31, 2024 ರಿಂದ ಫೆಬ್ರವರಿ 12ರವರೆಗೆ ಸಾರಥಿ ಪೋರ್ಟಲ್‌ನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದಾಗಿ, ಅರ್ಜಿದಾರರು ಪರವಾನಗಿ ಸಂಬಂಧಿತ ಸೇವೆಗಳನ್ನು ಪಡೆಯುವಲ್ಲಿ ಅಡೆತಡೆ ಎದುರಿಸಿದ್ದಾರೆ.
ಹೀಗಾಗಿ ಜ.31, 2024 ಮತ್ತು ಫೆ.15, 2024 ರ ನಡುವೆ ಮುಕ್ತಾಯಗೊಂಡ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಸಿಂಧುತ್ವವನ್ನು ಫೆ. 29, 2024 ರವರೆಗೆ ಯಾವುದೇ ದಂಡ ವಿಧಿಸದೆ ಮಾನ್ಯವೆಂದು ಪರಿಗಣಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.
ಆನ್‌ಲೈನ್ ಸೇವೆಗಳ ಭಾಗಶಃ ಸ್ಥಗಿತ / ನಿಷ್ಕ್ರಿಯತೆಯಿಂದಾಗಿ, ಅರ್ಜಿದಾರರು ಶುಲ್ಕ ಪಾವತಿ, ಚಾಲನಾ ಪರವಾನಗಿ ನವೀಕರಣ, ಕಲಿಕಾ ಪರವಾನಗಿಗಾಗಿ ಸ್ಲಾಟ್ ಬುಕಿಂಗ್, ಚಾಲನಾ ಕೌಶಲ್ಯ ಪರೀಕ್ಷೆ ಮುಂತಾದ ಸೇವೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))